ವಿಕಾಸ್ ಕಾಲೇಜಿನಲ್ಲಿ ವಿವಿಧ ಕ್ಲಬ್‌ಗಳ ಉದ್ಘಾಟನೆ
ಮಂಗಳೂರು, ಆ.12: ನಗರದ ವಿಕಾಸ್ ಕಾಲೇಜಿನಲ್ಲಿ ಇಂದು ವಿವಿಧ ಕ್ಲಬ್‌ಗಳನ್ನು ಅಕ್ಷಯ ಪಾತ್ರಾ ೌಂಡೇಶನ್ ಪಬ್ಲಿಕ್ ರಿಲೇಶನ್ ಲೀಡರ್ ಶರದ್ ವಿಹಾರಿ ದಾಸಾ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬರೀ ಓದು ಸಾದಾ ಊಟ ಇದ್ದ ಹಾಗೆ. ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗೆ ತೊಡಗಿಕೊಂಡರೆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಓದು ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವಾಗ ಎಲ್ಲವನ್ನೂ ಸಮತೋಲನ ಮಾಡಲು ಕಲಿಯಬೇಕು. ಸಂಘಗಳಿಲ್ಲದೇ ಸಾಧನೆ ಮಾಡಲು ಅಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಕಾಲೇಜಿನ ಮುಖ್ಯಸ್ಥ ಜೆ.ಕೃಷ್ಣ ಪಾಲೆಮಾರ್, ದಕ್ಷಿಣ ಕನ್ನಡ ಜಿಲ್ಲೆ ಎಲ್ಲಾ ಸಾಧನಾ ಕ್ಷೇತ್ರದಲ್ಲೂ ಮುಂದಿದೆ. ವಿಕಾಸ್ ಕಾಲೇಜೂ ಕೂಡ ಇದನ್ನು ಧ್ಯೇಯವನ್ನಾಗಿಸಿದೆ. ಶಿಕ್ಷಣ ಒಂದು ವ್ಯವಹಾರವಲ್ಲ. ವಿದ್ಯಾರ್ಥಿಗಳಿಗೆ ಎಲ್ಲವನ್ನೂ ಒದಗಿಸಬೇಕು. ಇದೀಗ ವಿಕಾಸ್ ಕಾಲೇಜಿನಲ್ಲಿ 12 ಕ್ಲಬ್‌ಗಳು ಉದ್ಘಾಟನೆಗೊಳ್ಳುವುದು ಸಂತೋಷಕರ ವಿಷಯ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮ್ಯೂಸಿಕ್‌ಕ್ಲಬ್, ಡ್ಯಾನ್ಸ್‌ಕ್ಲಬ್, ಆರ್ಟ್‌ಕ್ಲಬ್, ಇಕೋ ಕ್ಲಬ್, ಯೋಗಕ್ಲಬ್, ಕಂಪ್ಯೂಟರ್ ಮತ್ತು ಇಲೆಕ್ಟ್ರಾನಿಕ್ ಕ್ಲಬ್, ಮ್ಯಾಜಿಕ್ ಕ್ಲಬ್, ಡ್ರಾಮಾ ಕ್ಲಬ್, ಫಿಟ್‌ನೆಸ್‌ಕ್ಲಬ್, ಲಿಟರರಿ ಕ್ಲಬ್, ಸ್ಪಿರಿಚುವಲ್ ಕ್ಲಬ್, ಮೂವಿ ಕ್ಲಬ್ ಉದ್ಘಾಟನೆಗೊಂಡಿತು. ಉದ್ಘಾಟನೆಯ ನಂತರ ವಿವಿಧ ಕ್ಲಬ್‌ಗಳಿಂದ ಕಾರ್ಯಕ್ರಮ
ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಕಾಸ್ ಎಜು ಸೊಲ್ಯುಶನ್ಸ್ ನಿರ್ದೇಶಕ ಡಾ. ಅನಂತ್ ಪ್ರಭು ಜಿ., ಸಂಚಾಲಕ ರಾಜಾರಾಮ್, ಉಪಪ್ರಾಂಶುಪಾಲೆ ಮೋಹನಾ , ವಿಕಾಸ್ ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿಗಳಾದ ಜೆ.ಕೊರಗಪ್ಪ, ಸೂರಜ್ ಕಲ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯದರ್ಶಿ ಪ್ರದೀಪ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅಲಿತೀಯಾ ಸ್ವಾಗತಿಸಿದರು. ಮಯೂರಿ ವಂದಿಸಿದರು. ಸೌಮ್ಯಾ ಕಾರ್ಯಕ್ರಮ ನಿರೂಪಿಸಿದರು.