×
Ad

ಸುಳ್ಯ: ವಿವಿಧ ಸಂಘ-ಸಂಸ್ಥೆಗಳಿಂದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ

Update: 2016-08-12 19:22 IST

ಸುಳ್ಯ, ಆ.12: ನಾಡಿನಾದ್ಯಂತ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಅರಂಬೂರಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಂಬೂರು ಒಕ್ಕೂಟ, ಶ್ರೀವರಮಹಾಲಕ್ಷ್ಮಿ ಪೂಜಾ ಸಮತಿ, ಶ್ರೀಮೂಕಾಂಬಿಕಾ ಭಜನಾ ಮಂದಿರ, ಸಾರ್ವಜನಿಕ ಅಯ್ಯಪ್ಪ ಸೇವಾ ಸಮಿತಿಗಳ ವತಿಯಿಂದ ಶ್ರೀಗೋಪಾಲಕೃಷ್ಣ ಸಭಾಭವನದಲ್ಲಿ ಶ್ರೀವರಮಹಾಲಕ್ಷ್ಮಿ ಪೂಜೆ ನಡೆಯಿತು.

ಯೇನೆಕಲ್ಲು, ಕೇನ್ಯ, ಹರಿಹರ ಪಲ್ಲತ್ತಡ್ಕ, ಸುಬ್ರಹ್ಮಣ್ಯ, ಮರಕತ, ಪಂಜ, ಅರಂತೋಡು, ಬೆಳ್ಳಾರೆ, ಎಡಮಂಗಲ, ಜಾಲ್ಸೂರು, ಅಜ್ಜಾವರಗಳಲ್ಲೂ ಶ್ರೀವರಮಹಾಲಕ್ಷ್ಮಿ ಪೂಜೆ ನಡೆಯಿತು.

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀವರಮಹಾಲಕ್ಷ್ಮಿ ಪೂಜೆ ನಡೆಯಿತು. ಬೆಳಗ್ಗೆ ದೇವತಾ ಪ್ರಾರ್ಥನೆ ಬಳಿಕ ಶ್ರೀವರಮಹಾಲಕ್ಷ್ಮಿ ಪೂಜೆ ನಡೆಯಿತು. ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಆಗಮಿಸಿದ ಎಲ್ಲರಿಗೂ ಗಿರೀಶ್ ಭಾರದ್ವಾಜ್-ಉಷಾ ಭಾರದ್ವಾಜ್ ದಂಪತಿ ರವಿಕೆಕಣ ಹಾಗೂ ಹಣ್ಣು ಹಂಪಲನ್ನು ಸೇವಾರೂಪವಾಗಿ ವಿತರಿಸಿದರು.

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀವರಮಹಾಲಕ್ಷ್ಮಿ ಪೂಜೆ ಸಂದರ್ಭ ಧಾರ್ಮಿಕ ಉಪನ್ಯಾಸ ನಡೆಯಿತು. ಸುಳ್ಯ ಕೇಶವಕೃಪಾದ ಶ್ರೀದೇವಿ ನಾಗರಾಜ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು ಅಧ್ಯಕ್ಷತೆ ವಹಿಸಿದ್ದರು. ಆಯಶ್ಯಲ್ಪದ ಗಿರೀಶ್ ಭಾರದ್ವಾಜ್, ಉಷಾ ಬಾರದ್ವಾಜ್, ಎಸ್.ಎನ್.ಜನಾರ್ದನ ಗೌಡ, ಬೆಳ್ಳಕುಂಞಿ ಗುಂಡ್ಯ, ಯತಿರಾಜ್ ಭೂತಕಲ್ಲು, ಅಚ್ಚುತ ಮಣಿಯಾಣಿ ಆಲೆಟ್ಟಿ, ರಾಮಚಂದ್ರ ಆಲೆಟ್ಟಿ ಅತಿಥಿಗಳಾಗಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮರ್ಕಂಜದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಜನಜಾಗೃತಿ ಸಮಿತಿ ಮತ್ತು ಜ್ಞಾನವಿಕಾಸ ಕೇಂದ್ರಗಳ ಜಂಟಿ ಆಶ್ರಯದಲ್ಲಿ 6ನೆ ವರ್ಷದ ವರಮಹಾಲಕ್ಷ್ಮಿ ಪೂಜೆ ಮತ್ತು ಒಕ್ಕೂಟ ಪದಗ್ರಹಣ ಸಮಾರಂಭ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ವಠಾರದಲ್ಲಿ ನಡೆಯಿತು. ಶಾಸಕ ಎಸ್. ಅಂಗಾರ ಸಮಾರಂಭವನ್ನು ಉದ್ಘಾಟಿಸಿದರು. ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಮೋನಪ್ಪ ಪೂಜಾರಿ ಹೈದಂಗೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ತಿಮ್ಮಯ್ಯ ನಾಕ್, ಸಂಪಾಜೆ ಜನ ಜಾಗೃತಿ ವೇದಿಕೆಯ ವಲಯಾಧ್ಯಕ್ಷ ಮಾಧವ ಗೌಡ ದೊಡ್ಡಿಹಿತ್ಲು, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ಜಗನ್ಮೋಹನ ರೈ ರೆಂಜಾಳ, ಮಿನುಂಗೂರು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೋಜಪ್ಪ ಕೆ.ಸಿ., ಯೋಜನಾಧಿಕಾರಿ ಯುವರಾಜ ಜೈನ್, ಸುಳ್ಯ ನಗರ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಿ.ಪದ್ಮನಾ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ರಘುರಾಮ ಅಂಗಡಿಮಜಲು ಮತ್ತು ಕುಸುಮ ವೇದಿಕೆಯಲ್ಲಿದ್ದರು. ಸೇವಾನಿರತ ಬಾಲಕೃಷ್ಣ ವರದಿ ವಾಚಿಸಿದರು. ರೋಹಿಣಿ ಸ್ವಾಗತಿಸಿ, ಬಾಲಕೃಷ್ಣ ವಂದಿಸಿದರು. ಶ್ರೀಕೃಷ್ಣ ಉಪಾಧ್ಯಾಯ ಪೂಜಾ ಪೌರೋಹಿತ್ಯ ನೆರವೇರಿಸಿದರು.

ಸುಳ್ಯದ ಬಾಲಾವಲಿಕಾರ್ ಸಾರಸ್ವತ ಸಮಾಜದ ವತಿಯಿಂದ ಸಾರ್ವಜನಿಕ ಶ್ರೀವರಮಹಾಲಕ್ಷ್ಮಿ ಪೂಜೆ ನಡೆಯಿತು. ಸುಳ್ಯದ ಶ್ರೀದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆದ ಶ್ರೀವರಮಹಾಲಕ್ಷ್ಮಿ ಪೂಜೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News