×
Ad

‘ನರೇಂದ್ರ ಮೋದಿ ವಿಚಾರ್ ಮಂಚ್’ ಬೋರ್ಡ್‌ನ ಕಾರಿನಲ್ಲಿ ‘ಅನುಮಾನಾಸ್ಪದ ಪ್ರಯಾಣ’

Update: 2016-08-12 20:44 IST

ಕಾಸರಗೋಡು, ಆ.12: ‘ನರೇಂದ್ರ ಮೋದಿ ವಿಚಾರ್ ಮಂಚ್’ ಎಂಬ ಬೋರ್ಡ್ ತೂಗಿಸಿ ಬಂದ ಕಾರನ್ನು ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ತಡೆದ ಘಟನೆ ನಡೆದಿದೆ.

ಕಾಸರಗೋಡು ಆಟಿಒ ಕಛೇರಿಯಲ್ಲಿ ನೋಂದಾಯಿಸಲ್ಪಟ್ಟ ಕಾರ್‌ನಲ್ಲಿ ‘ನರೇಂದ್ರ ಮೋದಿ ವಿಚಾರ್ ಮಂಚ್’, ಕೇರಳ ಸ್ಟೇಟ್ ಪ್ರೆಸಿಡೆಂಟ್ ‘ಯುವ’ ಎಂದು ಬೋರ್ಡ್ ಅಳವಡಿಸಿತ್ತು. ಕಳೆದ ಕೆಲವು ದಿನಗಳಿಂದ ಈ ಕಾರು ಮುಳ್ಳೇರಿಯ ಪರಿಸರದಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಕಾರನ್ನು ತಡೆದು ಹಿಡಿಯಲಾಯಿತು.

ಕಾರಿನಲ್ಲಿದ್ದ ರಾಜಾ ಮುಹಮ್ಮದ್‌ನನ್ನು ವಿಚಾರಣೆ ನಡೆಸಿದಾಗ ಈತ ಚೆನ್ನೈ ನಿವಾಸಿ ಎಂದು ತದ್ವಿರುದ್ಧ ಹೇಳಿಕೆ ನೀಡಿದ್ದನೆನ್ನಲಾಗಿದೆ. ಮಾಹಿತಿ ತಿಳಿದ ಆದೂರು ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದಾಗ ಈತ ಮಂಗಳೂರಿನಲ್ಲಿ ಯುವಜನ ಸಂಘಟನೆಯೊಂದರ ಪದಾಧಿಕಾರಿಯೆಂದು ತಿಳಿದು ಬಂದಿದೆ.

ಕಾರಿನಲ್ಲಿ ಇಂತಹ ಬೋರ್ಡ ಹಾಕಲು ಅನುಮತಿಯಿಲ್ಲದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಬೋರ್ಡನ್ನು ತೆಗೆದು ಹಾಕಲಾಯಿತೆಂದು ಆದೂರು ಪೊಲೀಸರು ತಿಳಿಸಿದ್ದಾರೆ. ಈತನ ಮುಳ್ಳೇರಿಯಾ ಪ್ರಯಾಣ ಅನುಮಾನಾಸ್ಪದವಾಗಿದೆಯೆಂದು, ಈ ಬಗ್ಗೆ ಸಮಗ್ರ ತನಿಖೆ ನಡೆಸ ಬೇಕೆಂದು ಸ್ಥಳೀಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News