×
Ad

ಬಿಗ್ ಎಫ್‌ಎಂನಿಂದ ‘ಬಿಗ್ ಗೋಲ್ಡನ್ ವಾಯ್ಸ್’ ಸ್ಪರ್ಧೆ

Update: 2016-08-12 20:55 IST

ಮಂಗಳೂರು, ಆ. 12: 92.7 ಬಿಗ್ ಎಫ್. ಎಮ್. ಸತತ 4ನೆ ಬಾರಿಗೆ ಬಿಗ್ ಗೋಲ್ಡನ್ ವಾಯ್ಸ್ ಎಂಬ ಸಂಗೀತ ಸ್ಪರ್ಧೆಯನ್ನು ಬಿಗ್ ಎಫ್. ಎಮ್ನ 45 ಶಾಖೆಗಳಲ್ಲಿ ಹಮ್ಮಿಕೊಂಡಿತು. ಬೆನೆಡ್ರಿಲ್ ಸಂಸ್ಥೆ ಇದರ ಪ್ರಯೋಜತ್ವವನ್ನು ವಹಿಸಿತ್ತು. ಮಂಗಳೂರು ವಿಭಾಗದ ಗ್ರಾಂಡ್ ಫಿನಾಲೆ, ಮಂಗಳೂರಿನಿಂದ ಚುನಾಯಿತರಾದ ಟಾಪ್ 5 ಸ್ಪರ್ಧಿಗಳ ನಡುವೆ ನಡೆಯಿತು.

ಅಮೂಲ್ಯ ಮಲ್ಲಿಕಾರ್ಜುನ್, ವಿನೋದ್ ಕುಮಾರ್, ದೀಪ್ತಿ ಭಟ್ಕಳ್, ಆಶೀಶ್, ಸಚಿನ್ ಕೆ. ಇವರು ಟಾಪ್ 5 ಸ್ಪರ್ಧಿಗಳಾಗಿದ್ದರು. ಸಂಗೀತ ನಿರ್ದೇಶ ಡಾ.ನಿತಿನ್ ಆಚಾರ್ಯ ಹಾಗೂ ಚಿತ್ರ ಸಾಹಿತಿ ಹಾಗೂ ನಿರ್ದೇಶಕ ಶಶಿರಾಜ್ ಕಾವೂರು ತೀರ್ಪುಗಾರರಾಗಿ ಉಪಸ್ಥಿತರಿದ್ದರು. ಚಿತ್ರನಟಿ ಶ್ರುತಿ ಕೋಟ್ಯಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಅಮೂಲ್ಯ ಸಿಟಿ ವಿನ್ನರ್ ಆಗಿ ಮೂಡಿ ಬಂದರು. ನಂತರ ಶಶಿರಾಜ್ ಕಾವೂರು ಹಾಗೂ ಡಾ.ನಿತಿನ್ ಆಚಾರ್ಯ ಮಾತನಾಡಿ, ಬಿಗ್ ಎಫ್‌ಎಮ್ ಆಯೋಜಿಸಿದ್ದ ಈ ಸ್ಪರ್ಧೆ ನಿಜಕ್ಕೂ ಶ್ಲಾಘನೀಯ. ಇಂತಹ ಸ್ಪರ್ಧೆಗಳು ಹಮ್ಮಿಕೊಂಡಷ್ಟು ಪ್ರತಿಭೆಗಳಿಗೆ ಅವಕಾಶ ಹೆಚ್ಚು ಸಿಗುತ್ತದೆ ಎಂದರು.

ಅಮೂಲ್ಯ ಆಲ್ ಇಂಡಿಯಾ ಲೆವೆಲ್ನಲ್ಲಿ ಟಾಪ್ 10 ಹಂತಕ್ಕೆ ಬಂದರೆ, ಮುಂಬಯಿಯಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಮಾನ್ ಮಲ್ಲಿಕ್ ತೀರ್ಪು ನೀಡುವ ಸ್ಪರ್ಧೆಯಲ್ಲಿ ಭಾಗವಹಿಸಿ, ತೇರ್ಗಡೆಯಾದರೆ ಬಾಲಿವುಡ್‌ನಲ್ಲಿ ಹಾಡುವ ಅವಕಾಶ ಲಭಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News