ಶಿಕ್ಷಕರು ವ್ಯಕ್ತಿ ವಿಕಸನ ಶಿಲ್ಪಿಗಳು : ತುಂಗಪ್ಪಬಂಗೇರ
ಬಂಟ್ವಾಳ, ಆ. 20: ತಾಲೂಕಿನ ಕುಕ್ಕಿಪಾಡಿ ಸಂತ ಬಾರ್ತಲೋಮಿಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕೆರೆಬಳಿ ಮತ್ತು ಚೆನ್ನೈತ್ತೋಡಿ ಕ್ಲಸ್ಟರ್ ಮಟ್ಟದ ಪ್ರತಿಬಾ ಕಾರಂಜಿ ಸ್ಪರ್ಧೆ ನಡೆಯಿತು.
ಕಾರ್ಯಕ್ರಮವನ್ನು ಸಂಗಬೆಟ್ಟು ಮತ್ತು ಚೆನ್ನೈತ್ತೋಡಿ ತಾಪಂ ಸದಸ್ಯ ಪ್ರಭಾಕರ ಪ್ರಭು ಮತ್ತು ರತ್ನಾವತಿ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು. ಕುಕ್ಕಿಪಾಡಿ ಗ್ರಾಪಂ ಅಧ್ಯಕ್ಷ ದಿನೇಶ ಸುಂದರ ಶಾಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಪಂ ಸದಸ್ಯ ಎಂ.ತುಂಗಪ್ಪಬಂಗೇರ, ಚೆನ್ನೈತ್ತೋಡಿ ಗ್ರಾಪಂ ಅಧ್ಯಕ್ಷ ಯತೀಶ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರದೀಪ್ ಮತ್ತಿತರರು ಶುಭ ಹಾರೈಸಿದರು.
ಗ್ರಾಪಂ ಸದಸ್ಯರಾದ ಯೋಗೀಶ ಆಚಾರ್ಯ ಎಲ್ಪೇಲು, ಲಿಂಗಪ್ಪ ಪೂಜಾರಿ, ಸುಜಾತ ಪೂಜಾರಿ, ಸುಧಾಕರ ಶೆಟ್ಟಿ, ಸುಧೀಂದ್ರ ಶೆಟ್ಟಿ ಕಲಾಯಿದಡ್ಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಜೈನ್, ಕರಿಮಲೆ ಬಾಲ ಏಸು ಚರ್ಚಿನ ಪಾಲನಾ ಮಂಡಳಿ ಸದಸ್ಯ ಆಲ್ಬರ್ಟ್ ಡಿಸೋಜ, ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ. ಶ್ರೀಯಾನ್ ರಾಯಿ ಮತ್ತಿತರರು ಇದ್ದರು.
ಸ್ಪರ್ಧೆಯಲ್ಲಿ ಐದು ಗ್ರಾಪಂ ವ್ಯಾಪ್ತಿಯ ಒಟ್ಟು 25 ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮುಖ್ಯಶಿಕ್ಷಕ ಅಂಬ್ರೋಸ್ ವಾಲ್ಟರ್ ಸ್ವಾಗತಿಸಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಡಿ.ಕುಮಾರ್ ವಂದಿಸಿದರು. ಶಿಕ್ಷಕ ವೇದಾನಂದ ಕಾರಂತ ಕಾರ್ಯಕ್ರಮ ನಿರೂಪಿಸಿದರು.