×
Ad

ಬಂಟ್ವಾಳ: ಸೈಬರ್ ಕಾನೂನು ಮತ್ತು ಸೈಬರ್ ಅಪರಾಧ ಮಾಹಿತಿ ಕಾರ್ಯಾಗಾರ

Update: 2016-08-12 21:12 IST

ಬಂಟ್ವಾಳ, ಆ. 12: ವಕೀಲರ ಸಂಘ ಬಂಟ್ವಾಳ, ತಾಲೂಕು ಕಾನೂನು ಸೇವೆಗಳ ಸಮಿತಿ, ಅಧಿವಕ್ತ ಪರಿಷತ್ ಬಂಟ್ವಾಳ ಘಟಕ ಇದರ ಜಂಟಿ ಆಶ್ರಯದಲ್ಲಿ ಸೈಬರ್ ಕಾನೂನು ಮತ್ತು ಸೈಬರ್ ಅಪರಾಧ ಮಾಹಿತಿ ಕಾರ್ಯಾಗಾರವನ್ನು ಬಿ.ಸಿ.ರೋಡ್ ನ್ಯಾಯಾಲಯದ ಸಬಾಂಗಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ಉದ್ಘಾಟಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಯು. ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಡಾ. ಅನಂತ ಜಿ. ಪ್ರು ಸೈಬರ್ ಕಾನೂನು ಮತ್ತು ಸೈಬರ್ ಅಪರಾಧದ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಬಂಟ್ವಾಳ ಉಪ ವಿಬಾಗ ಡಿವೈಎಸ್‌ಪಿ ರವೀಶ್ ಸಿ.ಆರ್., ಸಹಾಯಕ ಸರಕಾರಿ ಅಭಿಯೋಜಕ ಎಂ.ಎಸ್.ಅಲಿ, ಪ್ರಧಾನ ಕಾರ್ಯದರ್ಶಿ ರಾಜಾರಾಮ ನಾಯಕ್ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ವೆಂಕಟ್ರಮಣ ಶೆಣೈ ಪ್ರಸ್ತಾವನೆಗೈದರು. ನ್ಯಾಯವಾದಿ ವಿರೇಂದ್ರ ಎಂ.ಸಿದ್ದಕಟ್ಟೆ ಸ್ವಾಗತಿಸಿದರು. ನ್ಯಾಯವಾದಿ ಮೊಗರ್ನಾಡ್ ವೆಂಕಟೇಶ್ ಭಟ್ ವಂದಿಸಿ, ನ್ಯಾಯವಾದಿ ನರೇಂದ್ರನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News