×
Ad

ಡಿಕೆಎಂಎಯಿಂದ ಗುರುತಿನ ಚೀಟಿ ವಿತರಣೆ

Update: 2016-08-12 23:43 IST

ಮಂಗಳೂರು, ಆ.12: ದ.ಕ. ಮುಸ್ಲಿಮ್ ಅಸೋಸಿಯೇಶನ್(ಡಿಕೆಎಂಎ) ವತಿಯಿಂದ ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಣೆ ಸಮಾರಂಭವು ಫಳ್ನೀರ್ ಸ್ಟರ್ರಕ್ ರಸ್ತೆಯಲ್ಲಿರುವ ಅಸೋಸಿಯೇಶನ್‌ನ ಕಚೇರಿಯಲ್ಲಿ ಇತ್ತೀಚೆಗೆ ಜರಗಿತು.

ಇದೇ ವೇಳೆ ಫಲಾನುಭವಿಗಳಿಗೆ ಡಿಕೆಎಂಎ ಗುರುತಿನ ಚೀಟಿ, ಯೆನೆಪೊಯ ಹೆಲ್ತ್ ಕಾರ್ಡ್ ಮತ್ತು ಟಾಟಾ ಡೊಕೊಮೊ ಸಿಮ್ ಕಾರ್ಡ್‌ನ್ನು ವಿತರಿಸಲಾಯಿತು.

ಈ ವೇಳೆ ಡಿಕೆಎಂಎ ಸ್ಥಾಪಕಾಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಉಪಾಧ್ಯಕ್ಷ ಮನ್ಸೂರ್ ಆಝಾದ್ ಹಾರ್ಡ್‌ವೇರ್, ಪ್ರಧಾನ ಕಾರ್ಯದರ್ಶಿ ಅಬೂಬಕರ್ ಗ್ರೂಪ್ 4, ಕಾರ್ಯದರ್ಶಿ ರಫೀಕ್ ಮಾಸ್ಟರ್, ಸಂಘಟನಾ ಕಾರ್ಯದರ್ಶಿ ಫಾರೂಕ್ ಎಸ್.ಎಂ, ರಿಫಾತ್ ಅಹ್ಮದ್ ಎಸ್.ಎಂ.ಆರ್ ಗ್ರೂಪ್, ಝುಬೈರ್ ಅಂಬರ್, ಅಂಬರ್ ಕನ್‌ಸ್ಟ್ರಕ್ಷನ್ ಮತ್ತು ಟಾಟಾ ಡೊಕೊಮೊ ಮಿಸ್ಬಾಹ್ ಕಮ್ಯುನಿಕೇಷನ್‌ನ ಮಾಲಕ ಮುಸ್ತಫಾ ಉಪಸ್ಥಿತರಿದ್ದರು.

ಡಿಕೆಎಂಎಯ ಫಲಾನುಭವಿ ಸದಸ್ಯರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಡಿಕೆಎಂಎ ಕಾರ್ಯಾಚರಿಸುತ್ತಿದೆ. ಹೆಚ್ಚಿನ ಮಾಹಿತಿಗೆ ಮೊ.8123099555ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News