ಕುಂಬ್ರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ ಕೆ.ಪಿ ಅಹ್ಮದ್ ಹಾಜಿ ಆಯ್ಕೆ
ಪುತ್ತೂರು, ಆ.13: ಕುಂಬ್ರ ಅಲ್‌ಮದ್ರಸತ್ತುಲ್ ಬದ್ರಿಯಾ ಮತ್ತು ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕೆ.ಪಿ. ಅಹ್ಮದ್ ಹಾಜಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುರ್ರಹ್ಮಾನ್ ಕೊಯ್ಲ ಆಯ್ಕೆಯಾದರು.
ಮಸೀದಿ ಸಮಿತಿಯ ಮಹಾಸಭೆಯು ಅಧ್ಯಕ್ಷ ಕೆ.ಪಿ. ಅಹ್ಮದ್ ಹಾಜಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಸೀದಿ ವಠಾರದಲ್ಲಿ ನಡೆದು ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ನೂತನ ಉಪಾಧ್ಯಕ್ಷರಾಗಿ ಮೂಸಾ ಮುಸ್ಲಿಯಾರ್ ಶಾಂತಿನಡಿ, ಜೊತೆ ಕಾರ್ಯದರ್ಶಿಯಾಗಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಶಾಂತಿನಡಿ, ಕೋಶಾಕಾರಿಯಾಗಿ ಇಬ್ರಾಹೀಂ ಕಡ್ತಿಮಾರ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಕೆ.ಬಿ., ಅರಬಿ ಕುಂಞಿ ಮಗಿರೆ, ಹಮೀದ್ ಕೊಯ್ಲ, ಹಸೈನಾರ್ ಕೊಯ್ಲ, ಅಬ್ಬಾಸ್ ಬ್ರೆಂಚ್, ಅಬ್ಬಾಸ್ ಕಡ್ತಿಮಾರ್, ಪಳ್ಳಿಕುಂಞಿ ಕಡ್ತಿಮಾರ್, ಯೂಸುಫ್ ಕಡ್ತಿಮಾರ್, ಸಿದ್ದಿಕ್ ಮಗಿರೆ, ಅಬ್ದುಲ್ಲ ಕೋಳಿಗದ್ದೆ, ಇಸ್ಮಾಯೀಲ್ ಕೋಳಿಗದ್ದೆ, ಇಸುಬು ರಿಕ್ಷಾ, ಇಸ್ಮಾಯೀಲ್ ಮಗಿರೆ ಆಯ್ಕೆಯಾದರು. ನಿಕಟಪೂರ್ವ ಕಾರ್ಯದರ್ಶಿ ಇಸ್ಮಾಯೀಲ್ ಕೋಳಿಗದ್ದೆ 2015-16 ನೇ ಸಾಲಿನ ಲೆಕ್ಕಪತ್ರವನ್ನು ಮಂಡಿಸಿದರು. ನಿರ್ಗಮನ ಉಪಾಧ್ಯಕ್ಷ ಹಮೀದ್ ಕೊಯ್ಲ ಸ್ವಾಗತಿಸಿದರು.
ಮಸೀದಿಯ ಖತೀಬ್ ಖಾಲಿದ್ ಸಅದಿ ದುಆ ನೆರವೇರಿಸಿದರು. ಸಹ ಅಧ್ಯಾಪಕ ಅಶ್ರಫ್ ಮುಸ್ಲಿಯಾರ್ ಉಪಸ್ಥಿತರಿದ್ದರು.