ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಗೆ ಪದಾಧಿಕಾರಿಗಳ ಆಯ್ಕೆ
Update: 2016-08-13 18:11 IST
ಮಂಗಳೂರು, ಆ.13: ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷರಾಗಿ ಎ. ಸದಾನಂದ ಶೆಟ್ಟಿ ಪುನರಾಯ್ಕೆಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಅಶೋಕ್ ಪೂವಯ್ಯ ಮತ್ತು ರಮಾನಂದ ರಾವ್, ಪ್ರಧಾನ ಕಾರ್ಯದರ್ಶಿಯಾಗಿ ಐವನ್ ಪತ್ರಾವೊ, ಜೊತೆ ಕಾರ್ಯದರ್ಶಿಗಳಾಗಿ ಡಾ. ಕಿಶೋರ್ ಕುಮಾರ್, ಗಣೇಶ್ ಪ್ರಸಾದ್ ಕೆ., ಖಜಾಂಚಿಯಾಗಿ ರಾಜೇಶ್ ಆಚಾರ್ಯ ಆಯ್ಕೆಯಾದರು.
ಕಾರ್ಯಕಾರಿಣಿ ಸದಸ್ಯರಾಗಿ ಪಿ. ವೆಂಕಟೇಶ್, ಸಂತೋಷ್ ಕುಮಾರ್ ಶೆಟ್ಟಿ, ಮುಹಮ್ಮದ್ ಹುಸೈನ್ (ನೂರ್), ಸುರೇಶ್ ಎಚ್.ಪಿ. ಆಯ್ಕೆಯಾದರು. ಸುಧೀಶ್ ಪಿ.ಕೆ. ಮತ್ತು ಸಿ.ಎಸ್. ಭಂಡಾರಿಯವರನ್ನು ಮಂಡಳಿ ಸದಸ್ಯರನ್ನಾಗಿ ಆರಿಸಲಾಯಿತು.
ಸುನೀಲ್ ರಾವ್ ಮತ್ತು ಮನೋರಾಜ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.