ವಿಜಯ್ ಮಲ್ಯ ವಿರುದ್ಧ ಸಿಬಿಐಯಿಂದ ಹೊಸ ಪ್ರಕರಣ
Update: 2016-08-13 19:10 IST
ಹೊಸದಿಲ್ಲಿ, ಆ.13: ಸಾಲ ಮರುಪಾವತಿ ಬಾಕಿಯ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ದೂರೊಂದನ್ನು ನೀಡಿದ ಬಳಿಕ, ಉದ್ಯಮಿ ವಿಜಯ್ ಮಲ್ಯರ ವಿರುದ್ಧ ಸಿಬಿಐ ಹೊಸ ಪ್ರಕರಣವೊಂದನ್ನು ದಾಖಲಿಸಿದೆಯೆಂದು ಶನಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಸ್‌ಬಿಐಯ ದೂರಿನ ಮೇಲೆ ತಾವು ಮಲ್ಯರ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿದಕೊಂಡಿದ್ದೇವೆಂದು ಸಿಬಿಐ ಅಧಿಕಾರಿಯೊಬ್ಬರು ಐಎಎನ್‌ಎಸ್‌ಗೆ ಹೇಳಿದ್ದಾರೆ.
ಮಲ್ಯ ಹಲವು ಬ್ಯಾಂಕ್‌ಗಳಿಗೆ ರೂ.9,431.65 ಕೋಟಿಗಳಷ್ಟು ಸಾಲ ಬಾಕಿ ಮಾಡಿದ್ದು, ಸಾಲದಾತ ಬ್ಯಾಂಕ್‌ಗಳ ಒಕ್ಕೂಟ ಅದರ ವಸೂಲಿಗಾಗಿ ಸುಪ್ರೀಂ ಕೋರ್ಟ್‌ನ ಮೆಟ್ಟಲೇರಿರುವ ಕೆಲವೇ ದಿನಗಳ ಮೊದಲು ಮಾ.2ರಂದು ಅವರು ಲಂಡನ್‌ಗೆ ಪರಾರಿಯಾಗಿದ್ದರು.