ಮೋದಿ-ಸುಶ್ಮಾರೊಂದಿಗೆ ಚೀನಿ ವಿದೇಶ ಸಚಿವನ ಭೇಟಿ

Update: 2016-08-13 14:17 GMT

ಹೊಸದಿಲ್ಲಿ, ಆ.13: ಚೀನದ ವಿದೇಶಾಂಗ ಸಚಿವ ವಾಂಗ್ ಯಿ, ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಅವರು ತನ್ನ ಭಾರತೀಯ ಸೋದ್ಯೋಗಿ ಸುಶ್ಮಾ ಸ್ವರಾಜ್‌ರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯ ವೇಳೆ, ಇತರ ಪ್ರಾದೇಶಿಕ ಹಾಗೂ ದ್ವಿಪಕ್ಷೀಯ ವಿಚಾರಗಳೊಂದಿಗೆ, ಎನ್‌ಎಸ್‌ಜಿ ಸದಸ್ಯತ್ವದ ಕುರಿತು ಭಾರತದ ಪ್ರಯತ್ನ ಸಹ ಚರ್ಚೆಗೆ ಬಂತೆನ್ನಲಾಗಿದೆ.

ವಾಂಗ್ ಹಾಗೂ ಸುಶ್ಮಾ, ಭಾರತದ ಆತಿಥೇಯತ್ವದಲ್ಲಿ ಗೋವಾದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ವಾರ್ಷಿಕ ಬ್ರಿಕ್ಸ್ ಸಮ್ಮೇಳನದ ಕುರಿತಾಗಿಯೂ ಚರ್ಚೆ ನಡೆಸಿದ್ದಾರೆ.

ಹೊಸದಿಲ್ಲಿಯಲ್ಲಿ ಸುಶ್ಮಾ ಸ್ವರಾಜ್ ತನ್ನ ಚೀನಿ ಸೋದ್ಯೋಗಿ ವಾಂಗ್ ಯಿಯವರೊಂದಿಗೆ ಪರಸ್ಪರ ಪ್ರಾಮುಖ್ಯದ ವಿಷಯಗಳ ಕುರಿತು ಮಾತುಕತೆ ನಡೆಸುತ್ತಿದ್ದಾರೆಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, ಸಭೆಯ ಚಿತ್ರದೊಂದಿಗೆ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News