ಒಂದೇ ಶೂನಲ್ಲಿ ಓಡಿ ಎಲ್ಲರ ಹೃದಯ ಗೆದ್ದ ಇಥಿಯೋಪಿಯದ ಅಥ್ಲೀಟ್ ಡಿರೋ

Update: 2016-08-14 06:18 GMT

  ರಿಯೋ ಡಿ ಜನೈರೊ, ಆ.14: ಇಥಿಯೋಪಿಯದ ಓಟಗಾರ್ತಿ ಎಟೆನೆಶ್ ಡಿರೋ 3,000 ಮೀ. ಸ್ಟೀಪಲ್‌ಚೇಸ್ ವೇಳೆ ಒಂದುಕಾಲಿನ ಶೂ ಕಳಚಿಬಿದ್ದರೂ ಓಟವನ್ನು ಮುಂದುವರಿಸಿ ಸಾಹಸ ಮರೆದರು. ಡಿರೋ ಅಂತಿಮವಾಗಿ 7ನೆ ಸ್ಥಾನ ಪಡೆದರೂ ಫೈನಲ್‌ನಲ್ಲಿ ಸ್ಪರ್ಧಿಸುವ ಅವಕಾಶವನ್ನು ನೀಡಲಾಯಿತು.

ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್ ಓಟದಲ್ಲಿ ಫೇವರಿಟ್ ಆಗಿದ್ದ ಡಿರೋ ಶನಿವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಶೂ ಕಳಚಿಬೀಳುವ ತನಕ ಮೊದಲ ಸ್ಥಾನದಲ್ಲೇ ಇದ್ದರು. 25ರ ಹರೆಯದ ಓಟಗಾರ್ತಿ ಶೂವನ್ನು ಕಾಲಿಗೆ ಹಾಕಿಕೊಳ್ಳಲು ಯತ್ನಿಸಿದರೂ ಶೂ ಲೇಸ್ ಬಿಗಿಯಾಗಿ ಕಟ್ಟಿದ್ದ ಕಾರಣ ಅದು ಸಾಧ್ಯವಾಗಲಿಲ್ಲ. ಡಿರೋ ಕೊನೆಯ 800 ಮೀ. ದೂರವನ್ನು ಒಂದೇ ಶೂನಲ್ಲಿ ಓಡಿ ಏಳನೆ ಸ್ಥಾನ ಪಡೆದರು. ಫೈನಲ್‌ಗೆ ಅರ್ಹತೆ ಪಡೆಯಲೂ ವಿಫಲರಾಗಿದ್ದರು.

 ಇಥಿಯೋಪಿಯ, ಐರ್ಲೆಂಡ್ ಹಾಗೂ ಜಮೈಕಾ ತಂಡಗಳ ಅಥ್ಲೀಟ್‌ಗಳ ತೀವ್ರ ಒತ್ತಾಯದ ಬಳಿಕ ಡಿರೋಗೆ ಸೋಮವಾರ ನಡೆಯಲಿರುವ ಫೈನಲ್‌ನಲ್ಲಿ ಸ್ಪರ್ಧಿಸುವ ಅವಕಾಶ ಕಲ್ಪಿಸಲಾಯಿತು. ಲಂಡನ್ ಒಲಿಂಪಿಕ್ಸ್‌ನಲ್ಲಿ 6ನೆ ಸ್ಥಾನ ಪಡೆದಿದ್ದ ಡಿರೋ ಸೋಮವಾರ ನಡೆಯಲಿರುವ ಫೈನಲ್‌ನಲ್ಲಿ ಪದಕ ಗೆಲ್ಲುವ ಫೇವರಿಟ್ ಅಥ್ಲೀಟ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News