×
Ad

ಸಿರಿಯ ಬಿಕ್ಕಟ್ಟು ಪರಿಹಾರಕ್ಕೆ ಇರಾನ್- ಟರ್ಕಿ ಪರಸ್ಪರ ಸಹಕರಿಸಲು ನಿರ್ಧಾರ

Update: 2016-08-14 12:12 IST

ಅಂಕಾರ,ಆಗಸ್ಟ್ 14: ಆಂತರಿಕ ಸಂಘರ್ಷದಿಂದ ತತ್ತರಿಸಿ ಹೋಗಿರುವ ಸಿರಿಯಾದ ಬಿಕ್ಕಟ್ಟು ಪರಿಹಾರಕ್ಕೆ ಪರಸ್ಪರ ಸಹಕರಿಸಲಿದ್ದೇವೆ ಎಂದು ಇರಾನ್ ಮತ್ತು ಟರ್ಕಿ ಜಂಟಿಯಾಗಿ ಘೋಷಿಸಿದೆ.

    ನಿನ್ನೆಟರ್ಕಿಯ ರಾಜಧಾನಿ ಅಂಕಾರದಲ್ಲಿ ನಡೆದ ಉಭಯ ರಾಷ್ಟ್ರಗಳ ವಿದೇಶ ಸಚಿವರ ಬೈಠಕ್‌ನಲ್ಲಿ ಈವಿಷಯದ ಮೇಲೆ ಉಭಯ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯಗಳು ಇದ್ದರೂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸಲು ನಿರ್ಧರಿಸಲಾಯಿತೆಂದು ಟರ್ಕಿ ವಿದೇಶ ಸಚಿವ ಮೌಲೂದ್ ಗಾವೂಶ್ ಒಗ್ಲು ಹೇಳಿದರು ಎಂದು ವರದಿಯಾಗಿದೆ.

ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಶರೀಫ್, ಸಿರಿಯದಲ್ಲಿ ಶಾಂತಿ ಸ್ಥಾಪನೆಗೆ ಜೊತೆಗೂಡಿ ಕೆಲಸ ಮಾಡುವ ಅಗತ್ಯವಿದೆಯೆಂದು ಹೇಳಿದ್ದು, ವಿಷಯದ ಮೇಲಿನಭಿನ್ನಾಭಿಪ್ರಾಯಗಳನ್ನು ಚರ್ಚಿಸುವ ಮೂಲಕ ಪರಿಹರಿಸಿಕೊಳ್ಳಬಹುದು ಎಂಬ ಆಶಾವಾದವನ್ನೂ ಪ್ರಕಟಿಸಿದ್ದಾರೆ. ಟರ್ಕಿ, ರಷ್ಯ ಪರಸ್ಪರ ಸಹಕಾರವನ್ನು ಮತ್ತೆ ಬಲಪಡಿಸಿರುವುದನ್ನು ಸ್ವಾಗತಿಸುವುದಾಗಿ ಅವರು ಹೇಳಿದ್ದಾರೆ. ಟರ್ಕಿ ಮತ್ತು ಇರಾನ್ ಸಿರಿಯ ವಿಷಯದಲ್ಲಿ ಎರಡು ಧ್ರುವಗಳಂತಿರುವ ದೇಶಗಳಾಗಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News