×
Ad

ಫೀಡಲ್ ಕ್ಯಾಸ್ಟ್ರೊ 90ನೆ ಹುಟ್ಟುಹಬ್ಬಕ್ಕೆ 90 ಮೀಟರ್ ಸಿಗಾರ್!

Update: 2016-08-14 13:48 IST

ಕ್ಯೂಬಾ, ಆ.14: ಖ್ಯಾತ ಕ್ರಾಂತಿಕಾರಿ ನಾಯಕ ಫೀಡೆಲ್ ಕ್ಯಾಸ್ಟ್ರೊ ಇದೀಗ ಹೊಸ ವಿಶ್ವದಾಖಲೆಗೆ ಮುಂದಾಗಿದ್ದಾರೆ. ತಮ್ಮ 90ನೆ ಹುಟ್ಟುಹಬ್ಬದ ಸಲುವಾಗಿ 90 ಮೀಟರ್ ಉದ್ದದ ಸಿಗಾರ್ ತಯಾರಿಸುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಸ್ಥಾಪಿಸಲು ಈ ಕ್ಯೂಬಾ ನಾಯಕ ಮುಂದಾಗಿದ್ದಾರೆ.
"ನಮ್ಮ ಕಾಮ್ರೇಡ್‌ನ 90ನೆ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು 90 ಮೀಟರ್‌ನ ಸಿಗಾರ್ ತಯಾರಿಸಲಾಗಿದೆ ಎಂದು ಇದನ್ನು ಸಿದ್ಧಪಡಿಸಿದ ಜೋಸ್ ಕ್ಯಾಸ್ಟರ್ ಹೇಳಿದ್ದಾರೆ. ಆಗಸ್ಟ್ 13ರಂದು ಕ್ಯಾಸ್ಟ್ರೊ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಇದನ್ನು ಸಮರ್ಪಿಸಲಾಗಿದೆ.
ಇವರ ಪ್ರಕಾರ ಕ್ಯಾಸ್ಟ್ರೊ ಆರನೆ ಬಾರಿಗೆ ತಮ್ಮದೇ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸುತ್ತಿದ್ದಾರೆ. ಇದುವರೆಗೆ 2011ರಲ್ಲಿ ಸಿದ್ಧಪಡಿಸಿದ 81.80 ಮೀಟರ್ ಉದ್ದದ ಸಿಗರೇಟ್ ವಿಶ್ವದಾಖಲೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News