×
Ad

ಶಾಸಕ ಮಾಕಾಳರಿಂದ ಚರ್ಚ್‌ ಅಭಿವೃದ್ಧಿಗಾಗಿ 50 ಲಕ್ಷರೂ. ಚೆಕ್ ಹಸ್ತಾಂತರ

Update: 2016-08-14 17:43 IST

ಭಟ್ಕಳ,ಆ.14: ತಾಲೂಕಿನ ಬೈಲೂರುಗ್ರಾಮ ಪಂಚಾಯತ ವ್ಯಾಪ್ತಿಯ ಪುರಾತನ ಚರ್ಚ್ ಅಭಿವೃದ್ಧಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನೀಡಲಾದ 50 ಲಕ್ಷರುಪಾಯಿ ಚೆಕ್‌ ನ್ನು ಶಾಸಕ ಮಂಕಾಳು ವೈದ್ಯ ಚರ್ಚಿನ ಫಾದರ್ ಲಾರೆನ್ಸ್ ಡಿ’ಸಿಲ್ವಾರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೈದ್ಯ, ಉತ್ತರಕನ್ನಡ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಚರ್ಚ್ ಅಭಿವೃದ್ಧಿಗಾಗಿ ದೊಡ್ಡ ಮೊತ್ತದ ಹಣವನ್ನು ನೀಡಲಾಗುತ್ತಿದೆ.ಅಲ್ಪಸಂಖ್ಯಾತರ ಕಲ್ಯಾಣಇಲಾಖೆಯಿಂದ 4 ಜೈನ ಬಸದಿ, 12 ಚರ್ಚುಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಸದ್ಯದಲ್ಲಿ ಅನುದಾನ ಬಿಡುಗಡೆಯಾಗುವ ವಿಶ್ವಾಸವಿದೆ.ಧಾರ್ಮಿಕ ದತ್ತಿ ಇಲಾಖೆಯಿಂದ ತಾಲೂಕಿನ 8 ದೇವಸ್ಥಾನಗಳ ಅಭಿವೃದ್ಧಿ ಪಡಿಸುವ ಚಿಂತನೆ ಜಾರಿಯಲ್ಲಿದೆ. ಆರಾಧನಾ ಯೋಜನೆಗಳನ್ನು ಚಿಕ್ಕ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ.ತಾಲೂಕಿನ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್, ಜೈನ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳು ಪುನರುಜ್ಜೀವನಗೊಳ್ಳುವ ಮೂಲಕ ತಾಲೂಕಿನಲ್ಲಿ ಶಾಶ್ವತವಾಗಿ ಸೌಹಾರ್ದತೆ ನೆಲೆಸಬೇಕು ಎಂಬ ಸಂಕಲ್ಪವನ್ನು ಹೊಂದಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಚರ್ಚ್ ಆಡಳಿತ ಮಂಡಳಿಯ ಕಾರ್ಯದರ್ಶಿ ವಾಲ್ವಿ ಡಿಸೋಜಾ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಬಸವರಾಜ್ ಬಳಿಗೇರ್, ತಾಲೂಕು ಪಂಚಾಯತ್ ಅಧ್ಯಕ್ಷ ಈಶ್ವರ ಬಿ.ನಾಯ್ಕ, ಸ್ಥಾಯಿ ಸಮಿತಿಯ ಅಧ್ಯಕ್ಷ ವಿಷ್ಣು ದೇವಡಿಗ, ಜಿಲ್ಲಾ ಪಂಚಾಯತ ಸದಸ್ಯೆ ಸಿಂಧೂ ಭಾಸ್ಕರ ನಾಯ್ಕ, ಬೈಲೂರುಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ನಾಯ್ಕ, ತಾಲೂಕು ಪಂಚಾಯತ ಸದಸ್ಯೆ ಗೌರಿದೇವಡಿಗ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News