×
Ad

ಮೂಡುಬಿದಿರೆ: ದೇವಾಡಿಗ ಸಂಘದಿಂದ ಆಟಿಡೊಂಜಿ ದಿನ

Update: 2016-08-14 19:39 IST

ಮೂಡುಬಿದಿರೆ,ಆ.14: ಗೌರಿಕೆರೆ ಶ್ರೀರಾಮಪುರದಲ್ಲಿರುವ ದೇವಾಡಿಗ ಸುಧಾರಕ ಸಂಘ, ದೇವಾಡಿಗ ಮಹಿಳಾ ವೇದಿಕೆ ಹಾಗೂ ದೇವಾಡಿಗ ಯುವ ವೇದಿಕೆ ವತಿಯಿಂದ 6ನೇ ವರ್ಷದ ಆಟಿಡೊಂಜಿ ದಿನ ಹಾಗೂ ಸಮುದಾಯದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ದೇವಾಡಿಗ ಸಮಾಜ ಭವನದಲ್ಲಿ ಭಾನುವಾರ ನಡೆಯಿತು.

ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧುನಿಕ ಜೀವನಶೈಲಿಯಲ್ಲಿ ನಮ್ಮ ತುಳುನಾಡಿನ ವಿಚಾರಧಾರೆಗಳನ್ನು ಯುವಜನರಿಗೆ ತಲುಪಿಸಲು ಆಟಿಡೊಂಜಿ ದಿನ ಕಾರ್ಯಕ್ರಮ ಸಹಕಾರಿಯಾಗುತ್ತದೆ. ಶ್ರಮಜೀವಿಗಳಾದ ದೇವಾಡಿಗ ಸಮುದಾಯದವರು ತುಳುನಾಡಿನ ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದರು.

ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಸೀಮಾ ಎಸ್ .ಕಾರ್ಕಳ ಮುಖ್ಯ ಅತಿಥಿಯಾಗಿ ಮಾತನಾಡಿ, ಆಟಿಡೊಂಜಿ ದಿನ ನಮ್ಮ ಹಿರಿಯರನ್ನು ನೆನಪಿಸುವ ದಿನವಾಗಬೇಕು. ತುಳುನಾಡಿನ ಸಂಸ್ಕೃತಿ, ಆಚಾರಣೆಗಳನ್ನು ಕ್ರಮ ಬದ್ಧವಾಗಿ ಮಾಡುವುದರಿಂದ ನಮ್ಮಲ್ಲಿ ಪರಂಪರೆಯ ಜಾಗೃತಿಯಾಗುತ್ತದೆ ಎಂದರು.

ಸಂಘದ ಅಧ್ಯಕ್ಷ ಶಶಿಧರ ದೇವಾಡಿಗ ಶಿರ್ತಾಡಿ ಅಧ್ಯಕ್ಷತೆ ವಹಿಸಿದ್ದರು.

ಚಂದು ಮೊಯಿಲಿ, ಗುಲಾಬಿ ಕಾನ, ಚಿನ್ನು ದೇವಾಡಿಗ, ರಾಜು ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪಿ.ರಮಾಕಾಂತ ದೇವಾಡಿಗ, ಮೂಡುಬಿದಿರೆ ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಪಡುಬಿದ್ರಿ ಸಂಘದ ಪ್ರತಿನಿಧಿ ಬಾಲಕೃಷ್ಣ ದೇವಾಡಿಗ, ಉಡುಪಿ ಸಂಘದ ಪ್ರತಿನಿಧಿ ಕೃಷ್ಣ ಶೇರಿಗಾರ್, ಚಲನಚಿತ್ರ ಗೀತರಚನೆಕಾರ ಲೋಕು ಕುಡ್ಲ ಮುಖ್ಯ ಅತಿಥಿಯಾಗಿದ್ದರು.

ಗೌರಿಕೆರೆ ಫ್ರೆಂಡ್ಸ್‌ನ ಸಂಪತ್ ದೇವಾಡಿಗ, ಮೂಡುಬಿದಿರೆ ದೇವಾಡಿಗ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ದೇವಾಡಿಗ, ರತ್ನಾಕರ ದೇವಾಡಿಗ, ರತ್ನಾಕರ ಸಿ.ಮೊಯಿಲಿ, ದೇವಾಡಿಗ ಯುವ ವೇದಿಕೆಯ ಅಧ್ಯಕ್ಷ ಸಂತೋಷ್ ದೇವಾಡಿಗ, ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಜೀವ ಮೊಯಿಲಿ, ಮಹಿಳಾ ವೇದಿಕೆಯ ನಿಕಟಪೂರ್ವ ಅಧ್ಯಕ್ಷೆ ಹೇಮಲತಾ ಶೇರಿಗಾರ್, ದಿಲೀಪ್ ದೇವಾಡಿಗ ದುಬೈ ಉಪಸ್ಥಿತರಿದ್ದರು.ಮಹಿಳಾ ವೇದಿಕೆ ಅಧ್ಯಕ್ಷೆ ರಮಾ ಪಿ. ದೇವಾಡಿಗ ಸ್ವಾಗತಿಸಿದರು. ಶ್ಯಾಮ್ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮೀ ಮೊಯಿಲಿ ಕಾರ್ಯಕ್ರಮ ನಿರೂಪಿಸಿದರು. ತುಳುನಾಡಿನ ವೈಶಿಷ್ಟ್ಯವನ್ನು ಸಾರುವ ವಿಶೇಷ ಖಾದ್ಯ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಮಹಿಳಾ ವೇದಿಕೆಯ ಜೊತೆ ಮಲ್ಲಿಕಾ ಪುರಂದರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News