ಆಸ್ಟ್ರೋಗೆ ಅಂತಾರಾಷ್ಟ್ರೀಯ ಪುರಸ್ಕಾರ

Update: 2016-08-14 15:04 GMT

ಉಡುಪಿ, ಆ.14: ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅಮೆರಿಕ, ಸಿಂಗಾಪುರ ಮತ್ತು ಗ್ರೀಸ್‌ನಲ್ಲಿ ಜರಗಿದ ಪ್ರಥಮ ಫೆಸಿಫಿಕ್ ಅಟ್ಲಾಂಟಿಕ್ ಇಂಟರ್ ನ್ಯಾಷನಲ್ ಫೊಟೋ ಗ್ರಾಫಿ ಸರ್ಕ್ಯೂಟ್‌ನಲ್ಲಿ ಹಾನರೇಬಲ್ ಮೆನ್ಷನ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಶ್ರೀಕೃಷ್ಣ ಮಠದ ರಥೋತ್ಸವದ ಚಿತ್ರಕ್ಕೆ ಈ ಅಂತಾರಾಷ್ಟ್ರೀಯ ಪುರಸ್ಕಾರ ಲಭ್ಯವಾಗಿದೆ. ಇದೇ ಸ್ಪರ್ಧೆಯಲ್ಲಿ ಅವರ ಇತರ 18 ಚಿತ್ರಗಳು ಸ್ವೀಕೃತ ಪ್ರಶಸ್ತಿಯನ್ನು ಪಡೆದಿವೆ. ಇದರೊಂದಿಗೆ ಆಸ್ಟ್ರೋ ಮೋಹನ್ 250 ಅಂತಾ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದವರ ಸಾಲಿಗೆ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News