ಗುಡ್ಡೆ ಅಂಗಡಿ ಮಸೀದಿ ಅಧ್ಯಕ್ಷರಾಗಿ ಮೊದಿನ್ ಹಾಜಿ ಆಯ್ಕೆ

Update: 2016-08-14 15:55 GMT

 ವಿಟ್ಲ,ಆ.12 : ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಇದರ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಮೊದಿನ್ ಹಾಜಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

         (ಮುಸ್ತಫಾ)

        ಇತ್ತೀಚೆಗೆ ನಡೆದ ಮಸೀದಿ ಪದಾಧಿಕಾರಿಗಳ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಮಸೀದಿ ಗೌರವಾಧ್ಯಕ್ಷ ಹಾಜಿ ಬಿ.ಎ. ಮುಹಮ್ಮದ್ ನಿಮಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ನೌಫಲ್ ರಹ್ಮಾನಿ ದುವಾ ನೆರವೇರಿಸಿದರು. ಉಪಾಧ್ಯಕ್ಷರಾಗಿ ಹಾಜಿ ಫಕೀರ್ ಅಹ್ಮದ್, ಜೊತೆ ಕಾರ್ಯದರ್ಶಿಗಳಾಗಿ ಉಮರುಲ್ ಫಾರೂಕ್, ರಮೀರ್, ಕೋಶಾಧಿಕಾರಿಯಾಗಿ ಎಸ್. ಮುಹಮ್ಮದ್, ಲೆಕ್ಕ ಪರಿಶೋಧಕರಾಗಿ ಅಬೂಬಕ್ಕರ್ ಮೆಲ್ಕಾರ್ ಅವರನ್ನು ಆರಿಸಲಾಯಿತು.

        ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ.ಬಿ. ಹಾಮದ್ ಹಾಜಿ, ಅಬ್ದುಲ್ ಹಮೀದ್, ಅಬ್ದುಲ್ಲಾ ಜಿ.ಎ., ಯಾಕೂಬ್ ಡ್ರೈವರ್, ಇಸ್ಮಾಯಿಲ್ ಪಿ.ಕೆ., ಅಬ್ದುಲ್ ಮಜೀದ್ ಡ್ರೈವರ್, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಕಾಸಿಂ, ಸುಲೈಮಾನ್, ಹನೀಫ್, ಮಜೀದ್ ಮೇಸ್ತ್ರಿ, ಸಾದಿಕ್, ಮಜೀದ್ ಮೆಲ್ಕಾರ್, ಅಮಾನುಲ್ಲಾ ಜಿ.ಎ. ಅವರನ್ನು ನೇಮಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News