ಸಮುದ್ರಕ್ಕೆ ಬಿದ್ದ ಮಹಿಳೆಯನ್ನು 38 ಗಂಟೆ ಬಳಿಕ ರಕ್ಷಣೆ
Update: 2016-08-15 12:34 IST
ಬೀಜಿಂಗ್, ಆ.15: ಚೀನದ ಶಾಂಗ್‌ಹಾದಿಂದ ಜಪಾನ್‌ನ ಫುಕುವೋದೆಡೆಗೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಮುದ್ರಕ್ಕೆ ಬಿದ್ದಿದ್ದ ಮಹಿಳೆಯೊಬ್ಬರನ್ನು 38 ಗಂಟೆಗಳ ನಂತರ ರಕ್ಷಿಸಲಾದ ಘಟನೆ ಚೀನದಿಂದ ವರದಿಯಾಗಿದೆ. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಚೀನದ ಬೆಸ್ತರು ಫಾನ್ ಎಂಬ 32 ವರ್ಷದ ಮಹಿಳೆಯನ್ನು ಜೀವಂತ ರಕ್ಷಿಸಿ ತಮ್ಮ ಬೋಟ್‌ನಲ್ಲಿ ದಡಕ್ಕೆ ಕರೆತಂದಿದ್ದಾರೆ ಎಂದು ವರದಿ ತಿಳಿಸಿದೆ.
ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಈ ಮಹಿಳೆ ಆಗಸ್ಟ್ ಹತ್ತರಂದು ಸಮುದ್ರಕ್ಕೆ ಬಿದ್ದಿದ್ದರು. ಎರಡು ದಿನಗಳ ಕಾಲ ಆಕೆ ನಿರಂತರ ಈಜುತ್ತಾ ಇದ್ದುದರಿಂದ ಪಾರಾಗಲು ಸಾಧ್ಯವಾಯಿತು ಎಂದು ರಕ್ಷಿಸಿ ಕರೆತಂದ ಫಾನ್ ಹೇಳಿದ್ದಾರೆ. ಸಣ್ಣಪುಟ್ಟ ಗಾಯಗಳನ್ನು ಹೊರತು ಪಡಿಸಿದರೆ ಮಹಿಳೆ ಆರೋಗ್ಯವಾಗಿದ್ದಾರೆ ಎಂದು ವರದಿ ತಿಳಿಸಿದೆ.