ಮುಲ್ಕಿ ಕಾರ್ನಾಡು ಮಸ್ಜಿದುನ್ನೂರಿನಲ್ಲಿ ಸ್ವಾತಂತ್ರೋತ್ಸವ
Update: 2016-08-15 12:42 IST
ಮಂಗಳೂರು, ಆ.15: ಕೇಂದ್ರ ಶಾಫಿ ಜುಮಾ ಮಸೀದಿ ಆಡಳಿತಕ್ಕೊಳಪಟ್ಟ ಮುಲ್ಕಿ ಕಾರ್ನಾಡು ಮಸ್ಜಿದುನ್ನೂರಿನಲ್ಲಿ ಮಸೀದಿ ಆಡಳಿತ ಸಮಿತಿ ವತಿಯಿಂದ ಇಂದು ಸ್ವಾತಂತ್ರೋತ್ಸವ ನಡೆಯಿತು. ಕೇಂದ್ರ ಮಸೀದಿ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಧ್ವಜಾರೋಹಣಗೈದರು. ಪ್ರಧಾನ ಕಾರ್ಯದರ್ಶಿ ಲಿಯಾಕತ್ ಅಲಿ ಸ್ವಾತಂತ್ರ ದಿನದ ಬಗ್ಗೆ ಮಾಹಿತಿ ನೀಡಿದರು. ಹೈದರ್ ಮುಸ್ಲಿಯಾರ್ ದುಆಗೈದರು. ಕಾರ್ಯಕ್ರಮದಲ್ಲಿ ಸದರ್ ಉಸ್ತಾದ್ ಶರೀಫ್ ಬಾಖವಿ, ಶರೀಫ್ ದಾರಿಮಿ ಉಮರ್ ಹಾಜಿ, ಅಕ್ಬರ್, ಮೊಯ್ದು, ಹಮೀದ್, ಖಾದರ್, ಹಸೈನ್ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮದ್ರಸದ ವಿದ್ಯಾರ್ಥಿಗಳು ಹಾಗೂ ಜಮಾಅತ್ ಬಾಂಧವರು ಭಾಗವಹಿಸಿದ್ದರು. ಕೋಶಾಧಿಕಾರಿ ಫಾರೂಕ್ ಹಾಜಿ ಸ್ವಾಗತಿಸಿದರು. ಫಾರೂಕ್ ಹಾಜಿ ಕಾರ್ಯಕ್ರಮ ನಿರೂಪಿಸಿದರು. ಲಿಯಾಕತ್ ಅಲಿ ವಂದಿಸಿದರು