×
Ad

ಬ್ರಹ್ಮಗಿರಿಯ ಸಾಯಿರಾಧಾ ಪ್ರೈಡ್‌ನಲ್ಲಿ ಸಾತಂತ್ರೋತ್ಸವ ಆಚರಣೆ

Update: 2016-08-15 13:29 IST

ಉಡುಪಿ, ಆ.15: ಇಲ್ಲಿನ ಬ್ರಹ್ಮಗಿರಿಯ ಸಾಯಿರಾಧಾ ಪ್ರೈಡ್ ನಿವಾಸಿಗಳು 70ನೆ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. 400ಕ್ಕೂ ಅಧಿಕ ಫ್ಲಾಟ್‌ಗಳನ್ನು ಹೊಂದಿರುವ ಈ ವಸತಿ ಸಂಕೀರ್ಣದ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ರಹ್ಮಾವರ ಗೋಪಾಲ ಶೆಟ್ಟಿ ಧ್ವಜಾರೋಹಣಗೈದು ಮಾತನಾಡಿದರು. ವಿಲಿಯಂ ಪೌಲ್ ಮಾರ್ಟಿನ್ ಮತ್ತು ಅಬ್ದುಲ್ ಗಫೂರ್ ಅತಿಥಿಗಳಾಗಿದ್ದರು. ಕಾರ್ಯಕ್ರಮದ ಸಂಯೋಜಕ ಇಕ್ಬಾಲ್ ಮನ್ನಾ ಸ್ವಾಗತಿಸಿದರು. ಬಳಿಕ ಮಕ್ಕಳಿಂದ ದೇಶಭಕ್ತಿಯನ್ನು ಸಾರುವ ನೃತ್ಯಗಳು, ಹಾಡುಗಾರಿಕೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News