ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ಸ್ವಾತಂತ್ರೋತ್ಸವ
Update: 2016-08-15 14:58 IST
ಬಂಟ್ವಾಳ, ಆ.15: ಇಲ್ಲಿನ ಮೆಲ್ಕಾರ್ ಮಹಿಲಾ ಕಾಲೇಜಿನಲ್ಲಿ 70ನೆ ಸ್ವಾತಂತ್ರೋತ್ಸವ ಆಚರಣೆ ಇಂದು ನಡೆಯಿತು.
ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕಾಲೇಜು ಆಡಳಿತ ಮಂಡಳಿಯ ಸದಸ್ಯ ಮನ್ಸೂರ್ ಅಹ್ಮದ್ ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ ಹಲವು ನಾಯಕರ ಅವಿರತ ಪ್ರಯತ್ನ ಹಾಗೂ ತ್ಯಾಗದ ಫಲ. ರಾಷ್ಟ್ರೀಯ ವ್ಯವಸ್ಥೆ ಹಾಗೂ ಸಂವಿಧಾನಕ್ಕೆ ಬದ್ಧವಾಗಿ ಪ್ರಜೆಗಳಾಗಿ ನಮ್ಮ ಕರ್ತವ್ಯ ಎಂದರು.