ಕಯ್ಯರು ಡಾನ್ ಬಾಸ್ಕೊ ಶಾಲೆಯಲ್ಲಿ ಸ್ವಾತಂತ್ರೋತ್ಸವ

Update: 2016-08-15 11:41 GMT

ಕಾಸರಗೋಡು, ಆ.15: ಕಯ್ಯರು ಡಾನ್ ಬೊಸ್ಕೊ ಎಯುಪಿ ಶಾಲೆಯಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯೆ ರಾಜೀವಿ ರೈ ಧ್ವಜಾರೋಹಣ ನೆರವೇರಿಸಿದರು.

ಶಾಲಾ ಸಂಚಾಲಕ ವಂ.ವಿಕ್ಟರ್ ಡಿಸೋಜ , ಶಾಲಾ ಮುಖ್ಯೋಪಾಧ್ಯಾಯ ಲೂಯಿಸ್ ಮೊಂತೆರೊ , ರಕ್ಷಕ  ಶಿಕ್ಷಕ ಸಂಘದ ಅಧ್ಯಕ್ಷ ಸ್ಟೀಫನ್ ಕ್ರಾಸ್ತ, ಮಾತೆಯರ ಸಂಘದ ಅಧ್ಯಕ್ಷೆ ವಿಲ್ಮಾ , ಕಯ್ಯಾರು ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜಾರ್ಜ್ ಡಿ ಅಲ್ಮೇಡಾ ಮೊದಲಾದವರು ಉಪಸ್ಥಿತರಿದ್ದರು.

ವಿದ್ಯಾನಿಧಿ ಯೋಜನೆಯಡಿ 16 ಶಾಲಾ ವಿದ್ಯಾರ್ಥಿಗಳಿಗೆ ಸಹಾಯನಿಧಿಯನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಶಿಕ್ಷಕ ಸಿರಿಲ್ ಕ್ರಾಸ್ತ ಸ್ವಾಗತಿಸಿ, ಶ್ರೀಮತಿ ಟೀಚರ್ ವಂದಿಸಿದರು. ಶಿಕ್ಷಕಿ ಶೈಲಾ ವಿಲ್ಮಾ ಲೋಬೊ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿನೋದಾವಳಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News