×
Ad

ಕಾಸರಗೋಡು: ಜಿಲ್ಲೆಯ 9 ಮಂದಿ ಪೊಲೀಸರಿಗೆ ಮುಖ್ಯಮಂತ್ರಿ ಪದಕ

Update: 2016-08-15 17:43 IST

ಕಾಸರಗೋಡು, ಆ.15: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಮುಖ್ಯಮಂತ್ರಿಗಳ ಪೊಲೀಸ್ ಪದಕ ಜಿಲ್ಲೆಯ ಒಂಬತ್ತು ಮಂದಿ ಪೊಲೀಸರಿಗೆ ಲಭಿಸಿದೆ.

ಹೊಸದುರ್ಗ ಸರ್ಕಲ್ ಇನ್‌ಸ್ಪೆಕ್ಟರ್ ಸಿ .ಕೆ ಸುನಿಲ್ ಕುಮಾರ್, ವಿದ್ಯಾನಗರ ಠಾಣಾ ಸರ್ಕಲ್ ಇನ್‌ಸ್ಪೆಕ್ಟರ್ ಬಾಬು ಪೆರಿಂಗಯತ್, ಕುಂಬಳೆ ಸರ್ಕಲ್ ಇನ್‌ಸ್ಪೆಕ್ಟರ್ವಿ.ವಿ. ಮನೋಜ್, ಆದೂರು ಸರ್ಕಲ್ ಇನ್‌ಸ್ಪೆಕ್ಟರ್ ಸಿಬಿ ಥೋಮಸ್ , ಆದೂರು ಠಾಣಾ ಸಬ್ ಇನ್‌ಸ್ಪೆಕ್ಟರ್ ಕೆ. ದಾಮೋದರನ್, ಕಾಸರಗೋಡು ಸ್ಪೆಷಲ್ ಬ್ರಾಂಚ್ ಎಸ್ಸೈ ಕೆ. ಭಾಸ್ಕರನ್, ಕಾಸರಗೋಡು ಸಶಸ್ತ್ರ ಮೀಸಲು ಪಡೆಯ ಎಎಸ್ಸೈ ಜಯರಾಜನ್, ವೆಳ್ಳರಿಕುಂಡು ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಯ ಅಧಿಕಾರಿ ಮುರಳೀಧರನ್, ಕಾಸರಗೋಡು ಪೊಲೀಸ್ ಠಾಣೆಯ ರಾಮಚಂದ್ರನ್‌ರಿಗೆ ಪೊಲೀಸ್ ಪದಕ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News