ಮೂಡುಬಿದಿರೆ: ಸರಕಾರಿ ಶಾಲೆಯಲ್ಲಿ ಸ್ವಾತಂತ್ರೋತ್ಸವ
Update: 2016-08-15 17:55 IST
ಮೂಡುಬಿದಿರೆ, ಆ.15:ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 70ನೆ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು. ಶಾಲಾ ಸಂಚಾಲಕ ಬಿ. ಪ್ರತಾಪ್ ಕುಮಾರ್ ಧ್ವಜರೋಹಣಗೈದು ಮಕ್ಕಳಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ, ಮಕ್ಕಳಿಗೆ ಎಳವೆಯಲ್ಲೇ ದೇಶಪ್ರೇಮ ಹಾಗೂ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಯುವಂತಾಗಬೇಕು ಎಂದು ನುಡಿದರು.
ಶಾಲಾ ತಾಯಂದಿರ ಸಮಿತಿ ಅಧ್ಯಕ್ಷೆ ಶಾಲಿನಿ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಶಶಿಕಾಂತ್ ವೈ., ಸ್ವಾತಂತ್ರ್ಯೋತ್ಸವದ ಮಹತ್ವದ ಬಗ್ಗೆ ಮಾತನಾಡಿದರು.
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಮಕ್ಕಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಸಹಶಿಕ್ಷಕಿಯರಾದ ಲಕ್ಷ್ಮೀ ಸ್ವಾಗತಿಸಿ , ಸಹಶಿಕ್ಷಕಿಯರಾದ ಅನ್ನಪೂರ್ಣಾ ವಂದಿಸಿದರು. ಸಹಶಿಕ್ಷಕ ನಾಗವರ್ಮ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು.