ಸ್ವಾತಂತ್ರ ದೇಶಕ್ಕೆ ಮಾತ್ರವಲ್ಲ ಮನಸ್ಸಿಗೂ ಅಗತ್ಯ: ತಹಶೀಲ್ದಾರ್ ಗುರುಪ್ರಸಾದ್

Update: 2016-08-15 12:55 GMT

ಕಾರ್ಕಳ, ಆ.15: ಸ್ವಾತಂತ್ರ ಕೇವಲ ದೇಶಕ್ಕೆ ಮಾತ್ರವಲ್ಲ, ನಾಗರಿಕ ಬದುಕಿಗೆ ಹಾಗೂ ಮಾನವನ ಮನಸ್ಸಿಗೂ ಬೇಕು. ನಮ್ಮ ಸಂಕುಚಿತತೆ, ಧಮಾಂಧತೆ, ಜಾತೀಯತೆ ಇವೆಲ್ಲವನ್ನೂ ಮೀರಿ ಮಾನವೀಯ ಅಂತಃಕರಣವನ್ನು ಬಳಸಿ ದುಡಿಯುವ ಮನಸ್ಸುನ್ನು ರೂಢಿಸಿಕೊಳ್ಳಲು ಮಾನವ ಕಂಕಣಬದ್ಧರಾಗಬೇಕು. ಸಾರ್ಥತೆಯನ್ನು ಬದಿಗಿಟ್ಟು ವಿಶಾಲ ಮನೋವೃತ್ತಿಯನ್ನು ಬೆಳೆಸುವುದರ ಮೂಲಕ ಗ್ರಾಮ, ವಲಯ,ದೇಶದ ಐಕತ್ಯೆಯ ಹಾಗೂ ಅಭಿವೃದ್ಧಿಯಲ್ಲಿ ತೊಡಗಬೇಕು ಎಂದು ಕಾರ್ಕಳ ತಹಶೀಲ್ದಾರ್ ಗುರುಪ್ರಸಾದ್  ಹೇಳಿದ್ದಾರೆ. 

ಅವರು ಕಾರ್ಕಳದ ಗಾಂಧಿ ಮೈದಾನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಹಾಗೂ ಕಾರ್ಕಳ ಪುರಸಭೆ ಆಶ್ರಯದಲ್ಲಿ ಜರುಗಿದ 70ನೆ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣಾಗೈದು ಪಥಸಂಚಲದ ಗೌರವ ಸ್ವೀಕರಿಸಿ ಮಾತನಾಡಿದರು.

ಎಲ್ಲಾ ಸರಕಾರಿ ಅಧಿಕಾರಿಗಳು ನಿಷ್ಠೆಯಿಂದ ಕರ್ತವ್ಯ ಪರಿಪಾಲನೆ, ಪಾರದರ್ಶಕ ಸೇವೆ ಹಾಗೂ ಉತ್ತರದಾಯಿತ್ವಕ್ಕೆ ವಿಶೇಷ ಮನ್ನಣೆ ನೀಡಬೇಕು. ವಿದ್ಯಾರ್ಥಿಗಳು, ಸಾರ್ವಜನಿಕರು ಅಧಿಖಾರಿಗಳು ಮತ್ತು ಆಡಳಿತದ ಲೋಪದೋಷಗಳನ್ನು ತಪ್ಪುಗಳನ್ನು ವಿವಿಧ ಮಜಲುಗಳಲ್ಲಿ ಪ್ರಶ್ನಿಸುವ ವಿಶೇಷ ಅಧಿಕಾರವನ್ನು ನೀಡಲಾಗಿದೆ ಎಂದರು.

ಪ್ರಸ್ತಕ ನಾವು ಸ್ವಾತಂತ್ರ್ಯ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೇಶದ ಮಹಾನ್ ಚೇತನರನ್ನು ಸ್ಮರಿಸುವ ವಿಶೇಷ ಅಭಿಯಾನಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಅವುಗಳ ಸಮರ್ಪಕ ಬಳಸಿಕೊಳ್ಳುವ, ನಿರ್ವಹಿಸುವ ಮಹತ್ವರ ಜವಾಬ್ದಾರಿಗೆ ನಾಗರಿಕರು ಕಂಕಣ ಬದ್ಧರಾಗಬೇಕೆಂದರು.

ಕಾರ್ಕಳ ಅನಂತಶಯನದ ವೃತ್ತದಲ್ಲಿ ಪುರಸಭಾಧ್ಯಕ್ಷೆ ಅನಿತಾ ಅಂಚನ್ ಧ್ವಜಾರೋಹಣ ನೆರವೇರಿಸಿ ಪುರಸಭಾ ವ್ಯಾಪ್ತಿಯ ಎಲ್ಲಾ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಸ್ಕಾಟ್, ಗೈಡ್ಸ್, ಸೇವಾದಳ, ಎನ್‌ಸಿಸಿ, ಹೋಂಗಾರ್ಡ್, ಕಾಲೇಜಿನ ಎನ್ನೆಸ್ಸೆಸ್, ರೋವರ್, ರೇಂಜರ್, ರಿಕ್ಷಾಚಾಲಕ ಹಾಗೂ ಮಾಲಕರು ಅಲ್ಲಿಂದ ಪಥ ಸಂಚಲನದ ಮೂಲಕ ಗಾಂಧಿ ಮೈದಾನಕ್ಕೆ ತೆರಳಿದರು.

ಕಾರ್ಕಳ ಪೊಲೀಸರ ತಂಡವು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು. ಗ್ರಾಮಾಂತರ ಠಾಣಾಧಿಕಾರಿ ರಫೀಕ್ ಪೆರೇಡ್ ಕಮಾಂಡರ್‌ರಾಗಿ ಪಥಸಂಚಲನ ನೇತೃತ್ವ ವಹಿಸಿದರು. ಶಾಸಕ ಹಾಗೂ ವಿಧಾನಸಭಾ ಪ್ರತಿಪಕ್ಷ ಮುಖ್ಯಸಚೇತಕ ವಿ.ಸುನೀಲ್‌ಕುಮಾರ್, ಎಎಸ್ಪಿ ಡಾ. ಸುಮನಾ.ಡಿ ಗೌರವ ರಕ್ಷೆ ಸ್ವೀಕರಿಸಿದರು.
   
ಪೊಲೀಸ್ ವೃತ್ತನಿರೀಕ್ಷಕ ಜಾನ್ ಅಂತೋನಿ, ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್.ಕೋಟ್ಯಾನ್, ಶಿಕ್ಷಣಾಧಿಕಾರಿ ಮನಮೋಹನ್, ಪುರಸಭಾಧ್ಯಕ್ಷೆ ಅನಿತಾ ಅಂಚನ್, ಉಪಾಧ್ಯಕ್ಷ ಗಿರಿಧರ್ ನಾಯಕ್, ಮಾಜಿ ಅಧ್ಯಕ್ಷರಾದ ಎನ್.ಆರ್.ಸುಭೀತ್, ರಹಮತ್ ಎನ್.ಶೇಖ್, ಪ್ರತಿಮಾ ಮೋಹನ್ ರಾಣೆ, ಮಾಜಿ ಉಪಾದ್ಯಕ್ಷೆ ಶಶಿಕಲಾ ರಾಣೆ, ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ, ಸದಸ್ಯರಾದ ಅಶ್ಪಕ್ ಅಹಮ್ಮದ್, ಮಹಮ್ಮದ್ ಶರೀಫ್,ಶ್ರೀಧರ್, ಲಲಿತಾ ಭಟ್, ಪಾರ್ಶ್ವನಾಥ ವರ್ಮ, ಶಾಂತಿ ಶೆಟ್ಟಿ, ಅಕ್ಷಯ್ ರಾವ್, ಶುಭದ ರಾವ್, ಪ್ರಕಾಶ್ ರಾವ್, ಮಾಯಾ, ದಿವ್ಯಾ ಡಿ.ಪೈ, ಯೋಗೀಶ್ ದೇವಾಡಿಗ, ಸುನೀಲ್ ಕೋಟ್ಯಾನ್, ವಿವೇಕಾನಂದ ಶೆಣೈ, ಭೂಸೇನಾ ಮೇಜರ್ ಪ್ರಮೋದ್ ಪ್ರಭು, ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ತಾಲೂಕು ಪಂಚಾಯತ್ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ, ಪುರಸಭಾ ಮುಖ್ಯಾಧಿಕಾರಿ ರಾಯಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ಸುಂದರ ಪೂಜಾರಿ, ಕಂದಾಯ ನಿರೀಕ್ಷಕ ಸಂತೋಷ್, ಇಲಾಖಾಧಿಕಾರಿಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು.

ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ಶಾಲಾ ಮಕ್ಕಳು ಪಥಸಂಚಲನದಲ್ಲಿ ಪಾಲ್ಗೊಂಡು ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸುವ ಮೂಲಕ ದೇಶಪ್ರೇಮವನ್ನು ಮೆರೆದರು. ಸ್ಕೌಟ್, ಗೈಡ್ಸ್, ಸೇವಾದಳ, ಎನ್‌ಸಿಸಿ, ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳು ಧಾರಾಕಾರ ಸುರಿಯುತ್ತಿರುವ ಮಳೆಯಲ್ಲಿ ಮೈಚಳಿ ಬಿಟ್ಟು ಬ್ಯಾಂಡ್ ಸೆಟ್‌ನ ವಾದನಕ್ಕೆ ಎದೆಯುಬ್ಬಿಸಿ ಶಿಸ್ತುಬದ್ಧವಾಗಿ ದಿಟ್ಟ ಹೆಜ್ಜೆಯನ್ನು ಇಡುತ್ತಾ ಪ್ರೇಕ್ಷಕ ಮನಗೆಲ್ಲುವುಲ್ಲಿ ಯಶಸ್ವಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News