×
Ad

ಉಳ್ಳಾಲ: ಎಸ್ಸೆಸ್ಸೆಫ್ ವತಿಯಿಂದ ಸ್ವಾತಂತ್ರ ದಿನಾಚರಣೆ

Update: 2016-08-15 20:47 IST

ಉಳ್ಳಾಲ, ಆ.15: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಹಾಗೂ ಮೇಲಂಗಡಿ ಶಾಖೆಗಳ ಜಂಟಿ ಆಶ್ರಯದಲ್ಲಿ ಮೇಲಂಗಡಿ ಫಿರ್ದೌಸ್ ಅಪಾರ್ಟ್‌ಮೆಂಟ್ ವರಾಂಡದಲ್ಲಿ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.

ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸೈಯದ್ ಖುಬೈಬ್ ತಂಙಳ್ ಧ್ವಜಾರೋಹಣ ಮಾಡಿದರು. ಉಸ್ಮಾನ್ ಸಖಾಫಿ ದುಆ ನೆರವೇರಿಸಿದರು. ನವಾಝ್ ಸಖಾಫಿ ಉಳ್ಳಾಲ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಹಾವೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಸ್ತಫಾ ನಯೀಮಿ ಹಾವೇರಿ ಸ್ವಾತಂತ್ರ್ಯ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಶಾಖಾಧ್ಯಕ್ಷ ಅಬ್ದುಸ್ಸಮದ್, ರಿಲೀಫ್ ಚೇರ್‌ಮಾನ್ ಮನ್ಸೂರ್ ಹಳೆಕೋಟೆ, ಉಳ್ಳಾಲ ದರ್ಗಾ ಸಮಿತಿಯ ಅಬ್ದುಲ್ ಅಝೀಝ್ ಕೋಡಿ, ಸತ್ತಾರ್ ಮೇಲಂಗಡಿ, ಅಬ್ದುಲ್ ಘನಿ, ನವಾಝ್ ಮೇಲಂಗಡಿ, ತಶ್ರೀಫ್ ಹಾಗೂ ಎಸ್ಸೆಸ್ಸೆಫ್ ಉಳ್ಳಾಲ ವಲಯದ ಕಾರ್ಯಕರ್ತರು ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News