ಸುರತ್ಕಲ್: ತಲೆಕೆಳಗಾಗಿ ಹಾರಿದ ರಾಷ್ಟ್ರಧ್ವಜ

Update: 2016-08-15 15:55 GMT

ಸುರತ್ಕಲ್, ಆ.15: ಇಲ್ಲಿನ ಭಾರತೀಯ ಜನತಾ ಪಾರ್ಟಿಯ ಶಕ್ತಿ ಕೇಂದ್ರ ಕೃಷ್ಣಾಪುರದ 6 ಬ್ಲಾಕ್‌ನಲ್ಲಿ ಆಯೋಜಿಸಿದ್ದ ಸ್ವಾತಂತ್ರ ದಿನಾಚರಣೆಯ ಧ್ವಜಾರೋಹಣದ ವೇಳೆ ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಹಾರಿಸಿದ ಘಟನೆ ವರದಿಯಾಗಿದೆ.

ಅದೇ ಪರಿಸರದಲ್ಲಿ ಶಾಸಕರ ಕಾರ್ಯಕ್ರಮ ನಿಮಿತ್ತ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬರು ಸಂಘಟಕರನ್ನು ಎಚ್ಚರಿಸಿ ಕಾರಣ ಕೂಡಲೇ ರಾಷ್ಟ್ರ ಧ್ವಜವನ್ನು ಸರಿಪಡಿಸಿ ಹಾರಿಸಲಾಯಿತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News