ಕೊಣಾಜೆ: ಸ್ವಾತಂತ್ರ ಆಚರಣೆ ಯಾವುದೇ ಧರ್ಮಕ್ಕೂ ಸೀಮಿತವಲ್ಲ: ಅಬ್ದುರ್ರಹ್ಮಾನ್ ಪೈಝಿ
Update: 2016-08-15 22:19 IST
ಕೊಣಾಜೆ, ಆ.15: ಭಾರತ ದೇಶದ ಪುಣ್ಯ ನೆಲವನ್ನು ಉಳಿಸುವ ಹೋರಾಟದಲ್ಲಿ ಎಲ್ಲಾ ಧರ್ಮೀಯರು ಭಾಗವಹಿಸಿ ಪ್ರಾಣ ಬಲಿದಾನ ಮಾಡಿರುವುದರಿಂದ ಸ್ವಾತಂತ್ರ ಆಚರಣೆ ಸರ್ವಧರ್ಮೀಯರ ಹಕ್ಕಾಗಿದೆ ಎಂದು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುರ್ರಹ್ಮಾನ್ ಪೈಝಿ ಹೇಳಿದರು.
ಬೋಳಿಯಾರ್ ಮುಹಿಯುದ್ದೀನ್ ಜುಮಾ ಮಸೀದಿ, ನೂರುಲ್ ಇಸ್ಲಾಂ ಮದರಸ, ಎಸ್ಕೆಬಿವಿ ಹಾಗೂ ಎಸ್ಕೆಎಸ್ಸೆಸ್ಸೆಫ್ ಇದರ ಸಂಯುಕ್ತ ಆಶ್ರಯದಲ್ಲಿ ಮಸೀದಿಯ ಆವರಣದಲ್ಲಿ ನಡೆದ ಸ್ವಾತಂತ್ರ ದಿನ ಧ್ವಜರೋಹಣ ಮಾಡಿ ಅವರು ಮಾತನಾಡಿದರು.
ನೂರುಲ್ ಇಸ್ಲಾಂ ಮದರಸದ ಮುಖ್ಯ ಶಿಕ್ಷಕ ಅಬ್ದುಲ್ ಸಲಾಂ ಚಿಶ್ತಿ ಸ್ವಾಗತಿಸಿದರು. ಅಧ್ಯಾಪಕ ಬಿ.ಎಂ.ಅಲಿ ವೌಲವಿ ಕುಡ್ತಮುಗೇರು ವಂದಿಸಿದರು.