×
Ad

ದುರ್ಬಲ ವರ್ಗದ ಪರವಾಗಿ ಪೊಲೀಸರು ಕಾರ್ಯ ನಿರ್ವಹಿಸುವ ಅಗತ್ಯವಿದೆ: ಸಚಿವ ರೈ

Update: 2016-08-15 23:35 IST

ಬಂಟ್ವಾಳ, ಆ. 15: ಸಮಾಜದಲ್ಲಿ ದುರ್ಬಲ ವರ್ಗದ ಜನರ ಮೇಲೆ ಅನ್ಯಾಯವಾಗುತ್ತಿದ್ದು ಅವರ ರಕ್ಷಣೆ ಪೊಲೀಸರು ಕಟಿಬದ್ಧರಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ತಾಲೂಕಿನ ಗ್ರಾಮೀಣ ಬಾಗವಾದ ಸಿದ್ಧಕಟ್ಟೆಯಲ್ಲಿ ಸೋಮವಾರ ನೂತನ ಪೊಲೀಸ್ ಉಪಠಾಣೆಯ ಲೋಕಾರ್ಪಣೆಗೈದು ಮಾತನಾಡಿದ ಸಚಿವರು ಸಮಾಜದಲ್ಲಿ ಎಲ್ಲ ಜನರ ಯೋಗ ಕ್ಷೇಮ ಕಾಯುವ ಕೆಲಸ ಪೊಲೀಸರದ್ದಾಗಿದ್ದು ಇಂದು ದುರ್ಬಲರ ಮೇಲೆ ಬಲಾಢ್ಯರ ದೌರ್ಜನ್ಯ ದಿನೇ ದಿನೆ ಹೆಚ್ಚಾಗುತ್ತಿದೆ. ಜವಾಬ್ದಾರಿ ಸ್ಥಾನದಲ್ಲಿರುವವರೇ ಸಮಾಜ ಬಾಹಿರ ಕೆಲಸಗಳಲ್ಲಿ ತೊಡಗಿರುವುದು ಆತಂಕದ ಸಂಗತಿಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ದಕ ಜಿಲ್ಲೆಯಲ್ಲಿ ಅನುಪಾತಕ್ಕನುಗುಣವಾಗಿ ಪೊಲೀಸ್ ಸಿಬಂದಿ ನೇಮಕವಾಗಬೇಕಾಗಿದ್ದು ಈ ನಿಟ್ಟಿನಲ್ಲಿ ಗೃಹ ಸಚಿವರೊಂದಿಗೆ ಚರ್ಚಿಸಲಾಗುವುದು. ಕಾನೂನು ಬಾಹಿರ ಚಟುವಟಿಕೆಗಳು ಗಮನಕ್ಕೆ ಬಂದಾಗ ತತ್‌ಕ್ಷಣ ಜನಸಾಮಾನ್ಯರು ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು. ಆಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಬಂಟ್ವಾಳ ತಾಲೂಕಿನಲ್ಲಿ ನಗರ ಮತ್ತು ಗ್ರಾಮಾಂತರ ಠಾಣೆಯ ಜೊತೆಗೆ ಇತ್ತೀಚೆಗಷ್ಟೆ ಟ್ರಾಫಿಕ್ ಪೊಲೀಸ್ ಠಾಣೆಯನ್ನು ತೆರೆಯಲಾಗಿದೆ. ಹಾಗೆಯೇ ಬಂಟ್ವಾಳದಲ್ಲಿ ಪೊಲೀಸ್ ಉಪ ವಿಬಾಗವನ್ನು ಆರಂಭಿಸಲಾಗಿದೆ ಎಂದ ಸಚಿವರು ಸಿದ್ದಕಟ್ಟೆಯಲ್ಲಿ ಐದು ಗ್ರಾಮಗಳಿಗೆ ಸೀಮಿತವಾಗಿ ಆರಂವಾಗಿರುವ ಉಪಠಾಣೆಗೆ ಅಕ್ಕಪಕ್ಕದ ಕುಕ್ಕಿಪಾಡಿ ಮತ್ತು ಎಲಿಯ ನಡುಗೋಡು ಗ್ರಾಮಗಳನ್ನು ಸೇರಿಸಿಕೊಂಡು ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಯತ್ನಿಸಲಾಗುವುದು ಎಂದರು.

ಕರ್ನಾಟಕ ವಿಧಾನ ಪರಿಷತ್‌ನ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ ಪೊಲೀಸರು ಯಾವುದೇ ತಪ್ಪು ಮಾಡಿದಾಗ ಅದರ ಪರಿಣಾಮ ನೇರವಾಗಿ ಸರಕಾರದ ಮೇಲಾಗುತ್ತದೆ. ಪೊಲೀಸರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಬದ್ಧವಾಗಿದ್ದು ಈಗಾಗಲೆ ಸಿಬಂದಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. 20 ಸಾವಿರ ಸಿಬಂದಿ ನೇಮಕಗೊಳಿಸುವ ಐತಿಹಾಸಿಕ ತೀರ್ಮಾನವನ್ನು ಗೃಹ ಸಚಿವರು ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ಪೊಲೀಸ್ ಮಹಾ ನಿರೀಕ್ಷಕ ಜೆ.ಅರುಣ್ ಚಕ್ರವರ್ತಿ ಮಾತನಾಡಿ ಈ ಹಿಂದೆ ಜಾರಿಯಲ್ಲಿದ್ದ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಪೊಲೀಸ್ ಠಾಣೆಯನ್ನು ಜನಸ್ನೇಹಿ ಠಾಣೆಯನ್ನಾಗಿ ರೂಪಿಸುವ ಮೂಲಕ ಪೊಲೀಸರ ಇಮೇಜ್ ಹೆಚ್ಚಿಸಲು ಕ್ರಮ ಗೈಗೊಳ್ಳಲಾಗಿದೆ ಎಂದರು.

ಸಂಗಬೆಟ್ಟು ಗ್ರಾಪಂ ಅಧ್ಯಕ್ಷೆ ಗುಲಾಬಿ ಶೆಟ್ಟಿ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ್ ಜೈನ್, ಬಂಟ್ವಾಳ ತಾಪಂ ಅಧ್ಯಕ್ಷ ಕೆ.ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯರಾದ ಪ್ರಬಾಕರ ಪ್ರು, ಮಂಜುಳಾ ಸದಾನಂದ, ಬೂಡ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ, ಅಪರ ಜಿಲ್ಲಾಧಿಕಾರಿ ಕುಮಾರ್, ತಹಶೀಲ್ದಾರ್ ಪುರಂದರ ಹೆಗ್ಡೆ, ಡಿವೈಎಸ್‌ಪಿ ರವೀಶ್, ಸಿಐ ಬಿ.ಕೆ.ಮಂಜಯ್ಯ, ಎಸ್‌ಐ ರಕ್ಷಿತ್ ಮತ್ತಿತರರಿದ್ದರು.

ಇದೇ ವೇಳೆ ಕುಕ್ಕಿಪಾಡಿ ಗ್ರಾಪಂ ಅಧ್ಯಕ್ಷ ದಿನೇಶ್ ಶಾಂತಿ ಕುಕ್ಕಿಪಾಡಿ ಮತ್ತು ಎಲಿಯನಡುಗೋಡು ಗ್ರಾಮವನ್ನು ಸಿದ್ದಕಟ್ಟೆ ಉಪ ಠಾಣಾ ವ್ಯಾಪ್ತಿಗೆ ಸೇರಿಸುವಂತೆ ಐಜಿಪಿ ಅವರಿಗೆ ಮನವಿ ಸಲ್ಲಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ಸಿ.ಬಿ.ವೇದಮೂರ್ತಿ ಅವರು ಸ್ವಾಗತಿಸಿ ಪ್ರಸ್ತಾವಿಸಿದರು.ಪೊಲೀಸ್ ಅೀಕ್ಷಕ ೂಷಣ್ ಗುಲಾಬರಾವ್ ಬೊರಸೆ ವಂದಿಸಿದರು.ದಿನೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.ಸಿದ್ದಕಟ್ಟೆಯಲ್ಲಿ ಪೊಲೀಸ್ ಉಪಠಾಣೆಯನ್ನು ತೆರಯ ಬೇಕೆಂಬ ಇಲ್ಲಿನ ಜನರ ಬಹು ದಿನಗಳ ಬೇಡಿಕೆ ಈಡೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News