ತುಳು ಭಾಷೆ ಉಳಿಯಬೇಕಾದರೆ ಕೃಷಿ ಉಳಿಯಬೇಕು: ಒಡಿಯೂರು ಶ್ರೀ

Update: 2016-08-15 18:18 GMT

ಮುಲ್ಕಿ, ಆ.15: ತುಳು ಭಾಷೆ ಉಳಿಯಬೇಕಾದರೆ ಕೃಷಿ ಉಳಿಯಬೇಕು, ಕೃಷಿ ಮತ್ತು ಭಾಷೆಗೆ ಹತ್ತಿರದ ಸಂಬಂಧ, ತುಳು ಭಾಷೆ ಎಂಟನೆ ಪರಿಚ್ಛೇದಕ್ಕೆ ಸೇರಬೇಕಾದರೆ ನಮ್ಮೆಲ್ಲರ ಪ್ರಯತ್ನ ಅಗತ್ಯ ಎಂದು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಮುಲ್ಕಿಯ ಬಪ್ಪನಾಡು ದೇವಳದ ಅವರಣದಲ್ಲಿ ನಡೆದ, ಟೈಮ್ಸ್ ಆಪ್ ಕುಡ್ಲ ತುಳು ಪತ್ರಿಕೆಯು ನಾಲ್ಕನೆ ವರ್ಷದ ಪಾದರ್ಪಾಣೆಯ ಸಂದಭರ್ ತುಳು ಐಸಿರದ ಐಸ್ರ ತುಳು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಸುನೀತ ಎಂ. ಶೆಟ್ಟಿ, ತುಳುವಿಗೆ ರಾಜ್ಯ ಮಾರ್ಯಾದೆ ಸಿಗದ ಕಾರಣ ತುಂಬಾ ನಷ್ಟವಾಗಿದೆ. ಆಯಾ ಪ್ರದೇಶದ ಭಾಷೆಗಳ ಶಬ್ದಗಳನ್ನು ಉಪಯೋಗಿಸುದರಿಂದ ಆ ಭಾಷೆಯ ಉಳಿವು ಸಾಧ್ಯವಿದೆ ಎಂದು ಅಭಿಪ್ರಾಯಿಸಿದ ಅವರು, ನಮ್ಮ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ನಾವೇ ಕಲಿಸಬೇಕು. ತುಳು ಕಲಿಕೆಗೆ ಪ್ರೋತ್ಸಾಹದ ಅಗತ್ಯ ಇದೆ ಎಂದರು.

ಈ ಸಂದರ್ಭದಲ್ಲಿ ಸಮ್ಮೇಳನಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಖಂಡಿಗೆ ಧರ್ಮರಸು ಉಳ್ಳಾಯ ದೈವಸ್ಥಾನದ ಅದಿತ್ಯ ಮುಕಾಲ್ದಿ, ದಿಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೇಟ್ಟಿ ಬೆಳ್ಳಾರೆ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಕರ್ನಾಟಕ ಬ್ಯಾಂಕ್‌ನ ಅಧಿಕಾರಿ ಶ್ರೀನಿವಾಸ ದೇಶಪಾಂಡೆ, ಕಟೀಲು ದೇವಳದ ಆಡಳಿತ ಮೊಕ್ತೇಸರ ಡಾ.ರವೀಂದ್ರನಾಥ ಪೂಂಜ, ಸುರತ್ಕಲ್ ಸೂರಜ್ ಇಂಟರ್ ನ್ಯಾಶಿನಲ್ ನ ತೆಳ್ಳಾರೆ ರವೀಂದ್ರ ಪೂಜಾರಿ, ರವೀಂದ್ರ ಶೆಟ್ಟಿ, ನಂದಳಿಕೆ ನಾರಯಣ ಶೆಟ್ಟಿ, ಕೆ.ಕೆ.ಶೆಟ್ಟಿ, ಜಯ ಶೆಟ್ಟಿ, ಸುರೇಂದ್ರ ಶೆಟ್ಟಿ, ಮುಂಬೈ ಜೆ.ಟಿ.ಆಚಾರ್ಯ, ಹರಿಕೃಷ್ಣ ಪುನರೂರು, ವೈ.ಎನ್. ಶೆಟ್ಟಿ, ಮೀನಾಕ್ಷಿ ಬಂಗೇರ, ದೇವಪ್ರಸಾದ್ ಪುನರೂರು, ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News