×
Ad

ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2016-08-15 23:50 IST

ಹಿರಿಯಡ್ಕ, ಆ.15: ವೈಯಕ್ತಿಕ ಕಾರಣದಿಂದ ಮನನೊಂದ ಹಿರಿಯಡ್ಕ ಜಂಗಮ ಮಠದ ಬಳಿಯ ನಿವಾಸಿ ಮಹಾಂತೇಶ್(32) ಎಂಬವರು ಆ.14 ರಂದು ರಾತ್ರಿ ಮನೆಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಹೆಬ್ರಿ: ಬೇಳಂಜೆ ಗ್ರಾಮದ ಕಮ್ತದ ಬಳಿಯ ಹೊನ್ಕಲು ಎಂಬಲ್ಲಿ ಆ.11ರಿಂದ 14ರ ಮಧ್ಯಾವಧಿಯಲ್ಲಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಬೇಳಂಜೆ ಕಮ್ತ ನಿವಾಸಿ ಆನಂದ ನಾಯ್ಕೆ (36) ಎಂಬವರ ಮೃತದೇಹವು ಆ.15ರಂದು ಬೆಳಗ್ಗೆ ಬೇಳಂಜೆ ಗ್ರಾಮದ ಗುಂಡಕಲ್ಲು ದೊಡ್ಡಹಕ್ಲು ಎಂಬಲ್ಲಿ ಹೊಳೆಯ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News