ಅಂದರ್ ಬಾಹರ್: ಇಬ್ಬರ ಸೆರೆ
Update: 2016-08-15 23:51 IST
ಕುಂದಾಪುರ, ಆ.15: ಕಂದಾವರ ಗ್ರಾಮದ ಮೂಡ್ಲಕಟ್ಟೆಯ ಹಾಲು ಡೈರಿಯ ಬಳಿ ಆ.14ರಂದು ಸಂಜೆ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಮೂಡ್ಲಕಟ್ಟೆಯ ರಾಘವೇಂದ್ರ ಪೂಜಾರಿ (34), ಕೋಣಿಯ ಪಿಯುಸ್ ಡಿಸೋಜ (48) ಎಂಬವರನ್ನು ಬಂಧಿಸಲಾಗಿದೆ. ಇತರ ಇಬ್ಬರು ಪರಾರಿಯಾಗಿದ್ದಾರೆ. ಬಂಧಿತರಿಂದ 1490 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.