×
Ad

ವಿದ್ಯಾರ್ಥಿಗಳ ವಿರುದ್ಧ ದೂರು

Update: 2016-08-15 23:53 IST

ಮಣಿಪಾಲ, ಆ.15: ಮಣಿಪಾಲ ಎಂಐಟಿ ವಿದ್ಯಾರ್ಥಿ ಜಾರ್ಖಂಡ್ ರಾಂಚಿಯ ಅಜಯ್ ಕುಮಾರ್ ಸಿಂಗ್ ಎಂಬವರ ಮಗ ಆದಿತ್ಯ ಇಶಾನ್‌ನ ಆತ್ಮಹತ್ಯೆಗೆ ಆತನ ಗೆಳೆಯರು ಹೀಯಾಳಿಸಿರುವುದೇ ಕಾರಣ ಎಂದು ತಿಳಿದು ಬಂದಿದೆ.
 ಆದಿತ್ಯ ಇಶಾನ್‌ರ ಹಳೆಯ ಗೆಳತಿ ಅರ್ತಿತಾ ಘೋಷ್ ಮತ್ತು ಆಕೆಯ ಗೆಳೆಯ ವೆಂಕಟೇಶ್ ಹಾಗೂ ಇತರರು ಆ.13ರಂದು ರಾತ್ರಿ ಮಣಿಪಾಲದ ಡಿ.ಟಿ. ಹೊಟೇಲ್‌ನಲ್ಲಿ ಆದಿತ್ಯನನ್ನು ಹೀಯಾಳಿಸಿದ್ದರು. ಇದರಿಂದ ಮನ ನೊಂದ ಆದಿತ್ಯ ಇಶಾನ್ ಆ.13ರಂದು ರಾತ್ರಿ ತನ್ನ ಹಾಸ್ಟೆಲ್‌ನ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ಅಜಯ್ ಕುಮಾರ್ ಸಿಂಗ್ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News