ಕೋಟೇಶ್ವರ: ಬ್ಯಾರೀಸ್ ಗ್ರೀನ್ ಅವೆನ್ಯು
Update: 2016-08-16 00:15 IST
ಕೋಟೇಶ್ವರ, ಆ.15: ಬೆಂಗಳೂರಿನ ಬ್ಯಾರೀಸ್ ಆ್ಯಂಡ್ ಡೆವೆಲಪ್‌ಮೆಂಟ್ ಸಂಸ್ಥೆ ವತಿಯಿಂದ ಕೋಟೇಶ್ವರದಲ್ಲಿ ನೂತನವಾಗಿ ನಿರ್ಮಿಸಲ್ಪಡುತ್ತಿರುವ ‘ಬ್ಯಾರಿಸ್ ಗ್ರೀನ್ ಅವೆನ್ಯು’ ವಸತಿ ಸಮುಚ್ಚಯದಲ್ಲಿ 70ನೆ ಸ್ವಾತಂತ್ರೋತ್ಸವನ್ನ್ನು ಆಚರಿಸಲಾಯಿತು.
ಕೋಟೇಶ್ವರ ಗ್ರಾಪಂ ಉಪಾಧ್ಯಕ್ಷ ಉದಯಕುಮಾರ್ ನಾಯಕ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ಥಳೀಯ ಗ್ರಾಪಂ ಸದಸ್ಯೆ ಸರಸ್ವತಿ ಸುಷ್ಮಾ ನಾಯಕ್, ಸುರೇಶ್ ದೇವಾಡಿಗ, ವಸತಿ ಸಂಕೀರ್ಣದ ಭೂಮಾಲಕ ಸುಲೈಮಾನ್, ಕೋಟೇಶ್ವರ ಸುಲ್ತಾನಿಯ ಜುಮಾ ಮಸೀದಿ ಅಧ್ಯಕ್ಷ ಆಸ್ಿ, ಖತೀಬ್ ವೌಲಾನಾ ಆಜಂ, ಕಟ್ಟಡ ವಿನ್ಯಾಸಕ ಪಿ.ಎಂ.ಇಕ್ಬಾಲ್, ವಸತಿ ಸಮುಚ್ಚಯದ ಮೇಲ್ವಿಚಾರಕ ಅಹ್ಮದ್ ಯೂಸ್ು, ಮುಖಂಡರಾದ ರಂಗನಾಥ್ ಭಟ್, ಗೋವಿಂದ ಕಾಂಚನ್ ಉಪಸ್ಥಿತರಿದ್ದರು.
ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಅಧ್ಯಾಪಕ ಸಂತೋಷ್ ಸ್ವಾಗತಿಸಿ, ವಂದಿಸಿದರು.