ಉಳ್ಳಾಲ ದರ್ಗಾ: ಸ್ವಾತಂತ್ರೋತ್ಸವ

Update: 2016-08-15 18:48 GMT

ಉಳ್ಳಾಲ, ಆ.15: ಸೈಯದ್ ಮದನಿ ದರ್ಗಾ ಸಮಿತಿ ಸದಸ್ಯರ, ದರ್ಗಾ ಅಧೀನದ 32 ಮಸೀದಿ ಹಾಗೂ ಮದ್ರಸಗಳ ಧಾರ್ಮಿಕ ಗುರುಗಳ ಮತ್ತು ದಅ್ವಾ ಹಿಫ್ಲುಲ್ ಕುರ್‌ಆನ್ ವಿದ್ಯಾರ್ಥಿಗಳ ಸಮ್ಮುಖದಲ್ಲಿ ದರ್ಗಾ ವಠಾರದಲ್ಲಿ ಹಾಗೂ ಇಲ್ಲಿನ ಜುಮಾ ಮಸೀದಿಯಲ್ಲಿ 70ನೆ ಸ್ವಾತಂತ್ರೋತ್ಸವ ವನ್ನು ಆಚರಿಸಲಾಯಿತು.

ದರ್ಗಾ  ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಉಳ್ಳಾಲ ಧ್ವಜಾರೋಹಣ ನೆರವೇರಿಸಿ ದರು. ಮಸೀದಿ ಖತೀಬ್ ಹಾಜಿ ಅಬ್ದುರ್ರವೂಫ್ ಮುಸ್ಲಿಯಾರ್ ದುಆ ನೆರವೇರಿಸಿದರು. ಈ ಸಂದರ್ಭ ದರ್ಗಾ ಉಪಾಧ್ಯಕ್ಷ ಬಾವ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಕೋಶಾಧಿಕಾರಿ ಯು.ಕೆ ಇಲ್ಯಾಸ್, ಆಡಿಟರ್ ಯು.ಟಿ. ಇಲ್ಯಾಸ್ ಮತ್ತು ಸಮಿತಿ ಸದಸ್ಯರು, ಮಸೀದಿ ಮದ್ರಸಗಳ ಧಾರ್ಮಿಕ ಗುರುಗಳು, ಜಮಾಅತ್ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News