ದೀಪಾ "ಪ್ರಡುನೊವ" ಮಾಡಿದ್ದನ್ನು ನಂಬಲಸಾಧ್ಯ; ನಾನದನ್ನು ಮಾಡೆ, ಅತ್ಯಂತ ಅಪಾಯಕಾರಿ ಅದು
ರಿಯೊ ಡಿ ಜನೈರೊ, ಆ.16: ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗಳಿಸದಿದ್ದರೂ, ಭಾರತದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಹೊಸ ತಾರೆಯಾಗಿ ರೂಪುಗೊಂಡಿದ್ದಾರೆ. ಅದರಲ್ಲೂ ಅವರ "ಪ್ರಡುನೊವ" ಪ್ರದರ್ಶನ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು ಚಿನ್ನದ ಪದಕ ವಿಜೇತ ಅಮೆರಿಕದ ಸಿಮೊನ್ ಕೂಡಾ ದೀಪಾ ಅವರ ಅಭಿಮಾನಿಯಾಗಿ ರೂಪುಗೊಂಡಿದ್ದಾರೆ!
ದೀಪಾ "ಪ್ರಡುನೊವ" ಮಾಡಿದ್ದನ್ನು ನಂಬಲಸಾಧ್ಯ; ನಾನದನ್ನು ಮಾಡಲಾರೆ; ಅದು ಅತ್ಯಂತ ಅಪಾಯಕಾರಿ ಎಂದು ಸಿಮೊನ್ ಹೇಳಿದ್ದಾರೆ.
ವಾಲ್ಟ್ ಚಿನ್ನದ ಮೇಲೆ ಕಣ್ಣಿಟ್ಟಿದ್ದ ಸಿಮೊನ್ ಪರಿಪೂರ್ಣ ಅಂಕ ಪಡೆಯುವ ಮೂಲಕ ಜಗತ್ತಿನ ಸರ್ವಶ್ರೇಷ್ಠ ಜಿಮ್ನಾಸ್ಟ್‌ಗಳಲ್ಲೊಬ್ಬರು ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಇವರು ಭಾರತದ ಜಿಮ್ನಾಸ್ಟ್ ಸಾಧನೆ ಬಗ್ಗೆ ಹೊಗಳಿಕೆಯ ಸುರಿಮಳೆಯನ್ನೇ ಹರಿಸಿದ್ದಾರೆ. ಭಾರತೀಯ ಜಿಮ್ನಾಸ್ಟ್ ದೀಪಾ ಅವರ ಬಹುತೇಕ ಪರಿಪೂರ್ಣ ಪ್ರೆಡೆನೊವಾ ಅವರನ್ನು ಪೋಡಿಯಂ ಸಮೀಪಕ್ಕೆ ತಂದಿತ್ತು. ಚಿನ್ನದ ಸಾಧನೆ ಮಾಡಿದ ಬೈಲ್ಸ್ ಡೊಮಿನೋಸ್ ರೀತಿಯಲ್ಲಿ ನೆಲಕ್ಕೆ ಇಳಿಯುವವರೆಗೂ ದೀಪಾ ಮೂರನೇ ಸ್ಥಾನದಲ್ಲಿದ್ದರು.
"ಭಾರತ ಎಂದೂ ವಿಶ್ವ ಜಿಮ್ನಾಸ್ಟಿಕ್ ನಕ್ಷೆಯಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಆದರೆ ಎರಡು ವರ್ಷಗಳ ಹಿಂದೆ ನಾವು ದೀಪಾಳನ್ನು ನೋಡಿದಾಗ ಆಕೆಯ ವೈಶಿಷ್ಟ್ಯ ಗಮನ ಸೆಳೆಯಿತು. ಇಂದು ಆಕೆ ನಮ್ಮೆಲ್ಲರ ಮನಗೆದ್ದಿದ್ದಾಳೆ" ಎಂದು ಒಲಿಂಪಿಕ್ ಚಾಂಪಿಯನ್ ಉದ್ಗರಿಸಿದರು.
ಅಮೆರಿಕದ ಪರಿಪೂರ್ಣ ಕ್ರೀಡಾ ತರಬೇತಿ ಸೌಲಭ್ಯ ಸಿಮೋನ್‌ಗೆ ಚಿನ್ನ ಗೆದ್ದುಕೊಟ್ಟಿದ್ದರೆ, ದೀಪಾ ನಾಲ್ಕನೆ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ್ದು, ದೇಶದ ಕ್ರೀಡಾ ಮೂಲಸೌಕರ್ಯವನ್ನು ಜಗಜ್ಜಾಹೀರುಗೊಳಿಸಿದೆ.