ಸಿಂಧು ಕ್ವಾರ್ಟರ್ ಫೈನಲ್‌ಗೆ, ವಿಕಾಸ್ ಕೃಶನ್ ಔಟ್
Update: 2016-08-16 09:51 IST
ರಿಯೋ ಡಿ ಜನೈರೋ, ಆ.16: ಭಾರತದ ಉದಯೋನ್ಮುಖ ಟೆನಿಸ್ ತಾರೆ ಹೈದರಾಬಾದ್ ನ ಪಿ.ವಿ. ಸಿಂಧು ಅವರು ರಿಯೋ ಒಲಿಂಪಿಕ್ಸ್ ನ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಇದೇ ವೇಳೆ ಭರವಸೆ ಮೂಡಿಸಿದ್ದ ಬಾಕ್ಸರ್ ವಿಕಾಸ್ ಕೃಶನ್ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಸೋಲು ಅನುಭವಿಸಿ, ಒಲಿಂಪಿಕ್ಸ್‌ನಲ್ಲಿ ಅಭಿಯಾನ ಕೊನೆಗೊಳಿಸಿದರು.
ಸಿಂಧು ಅವರು ಚೀನಾ ತೈಪೆಯ ತಾಯ್ ಝುವು ಯಿಂಗ್ ವಿರುದ್ಧ 21-13, 21-15 ನೇರ ಸೆಟ್ಗಳ ಜಯ ಗಳಿಸಿದರು. ಇವರ ನಡುವಿನ ಹೋರಾಟ 40 ನಿಮಿಷದಲ್ಲಿ ಕೊನೆಗೊಂಡಿತು. . ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ 2ನೇ ಶ್ರೇಯಾಂಕಿತೆ ಚೀನಾದ ವಾಂಗ್ ಯಿಹಾನ್ರನ್ನು ಎದುರಿಸಲಿದ್ದಾರೆ.
ಬಾಕ್ಸರ್ ವಿಕಾಸ್ ಕೃಷ್ಣನ್ ಪುರುಷರ 75 ಕೆ ಜಿ ವಿಭಾಗದಲ್ಲಿ ಉಜ್ಬೇಕಿಸ್ತಾನದ ಆಟಗಾರ ಬೆಕ್ತಮಿರ್ ಮೆಲಿಕುಜಿವ್ ವಿರುದ್ಧ ಸೋಲು ಅನುಭವಿಸಿದರು.