ಒಲಿಂಪಿಕ್ಸ್ ಪಾರ್ಕ್‌ನಲ್ಲಿ ಓವರ್ ಹೆಡ್ ಟಿವಿ ಕ್ಯಾಮರಾ ಬಿದ್ದು ಏಳು ಮಂದಿಗೆ ಗಾಯ
Update: 2016-08-16 10:49 IST
ರಿಯೊ ಡಿ ಜನೈರೊ, ಆ.16: ಒಲಿಂಪಿಕ್ಸ್ ಪಾರ್ಕ್‌ನ ಕ್ರೀಡಾಂಗಣದಲ್ಲಿ ಅಳವಡಿಸಲಾಗಿದ್ದ ಓವರ್ ಹೆಡ್ ಟಿವಿ ಕ್ಯಾಮರಾ ಕೆಳಕ್ಕೆ ಬಿದ್ದ ಪರಿಣಾಮವಾಗಿ ಏಳು ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಈ ಪೈಕಿ ನಾಲ್ವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕ್ರೀಡಾಂಗಣದ ವೀಕ್ಷಣೆಗೆ ದೊಡ್ಡ ಕ್ಯಾಮರಾವನ್ನು ಅಳವಡಿಸಲಾಗಿತ್ತು. ಕ್ಯಾಮರಾದ ಗೈಡ್ ಕೇಬಲ್ ಗಳು ತುಂಡಾದ ಪರಿಣಾಮ ಕ್ಯಾಮರಾ ಕೆಳಗೆ ಬಿದ್ದಿದೆ.ಕ್ಯಾಮರಾ ಅಳವಡಿಕೆಯಲ್ಲಿ ಸರಿಯಾಗದ ಹಿನ್ನೆಲೆಯಲ್ಲಿ ದುರಂತ ಸಂಭವಿಸಿದೆ.
ಕ್ಯಾಮರಾ ನೆಲಕ್ಕೆ ಬಿದ್ದು ಗ್ಲಾಸುಗಳ ಚೂರು ಪುಡಿಪುಡಿಯಾಗಿ ಹರಡಿದ ಪರಿಣಾಮ ಸ್ಥಳಕ್ಕೆ ಪ್ರವೇಶ ನಿಷೇಧಿಸಲಾಗಿದೆ.