ಹಳೆಯಂಗಡಿ: ಸರಕಾರಿ ಕಾಲೇಜಿನಲ್ಲಿ ‘ಸಂಬಂಧ ಕೌಶಲ’ ಕಾರ್ಯಾಗಾರ

Update: 2016-08-16 06:18 GMT

ಮುಲ್ಕಿ, ಆ.16: ಸಂಬಂಧಗಳನ್ನು ಬೆಳೆಸಲು ಹಾಗೂ ಜನರೊಂದಿಗೆ ಒಡನಾಡಲು, ತಂಡಗಳಲ್ಲಿ ಕೂಡಿ ಕೆಲಸ ಮಾಡಲು, ನಾಯಕತ್ವವನ್ನು ವಹಿಸಲು, ಕಾರ್ಯಶೀಲತೆಯನ್ನು ಪ್ರೇರೇಪಿಸಲು ಬೇಕಾಗುವ ಮೌಲ್ಯಗಳನ್ನು, ತಂತ್ರಗಳನ್ನು ಹಾಗೂ ದೃಷ್ಟಿ ಕೋನಗಳನ್ನು ಸಂಬಂಧ ಕೌಶಲ ಒಳಗೊಂಡಿದೆ. ವಿದ್ಯಾರ್ಥಿಗಳು ತಂಡಗಳಲ್ಲಿ ಕೂಡಿ ಕೆಲಸ ಮಾಡುವಾಗ ಗಮನವಿಟ್ಟು ಕೇಳುವುದು, ಉದಾರ ಮನೋಭಾವದಿಂದ ಅಭಿಪ್ರಾಯವನ್ನು ಸರಿಯಾಗಿ ಗ್ರಹಿಸುವುದು, ಪ್ರಾಮಾಣಿಕವಾದ ವಿನಿಮಯ, ಸಮಸ್ಯೆ ಪರಿಹಾರ ವಿಶ್ವಾಸ, ಸಹಕಾರ, ಕಾಳಜಿ ಮುಂತಾದ ಕೌಶಲ್ಯಗಳನ್ನು ರೂಢಿ ಮಾಡಿಕೊಂಡಿರಬೇಕು ಎಂದು ನಿವೇದಿತಾ ಲೋಬೊ ಹೇಳಿದರು.

ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಇದರ ಉದ್ಯೋಗ ಮಾರ್ಗದರ್ಶನ, ವೃತ್ತಿ ನಿಯೋಜನಾ ಕೋಶ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಜಂಟಿ ಆಶ್ರಯದಲ್ಲಿ ಅಂತಿಮ ಬಿ.ಬಿಎಂ., ಬಿ.ಕಾಂ. ಮತ್ತು ಬಿ.ಎ. ಪದವಿ ವಿದ್ಯಾರ್ಥಿಗಳಿಗೆ ಮತ್ತು ಎನ್ನೆಸ್ಸೆಸ್ ಕಾರ್ಯಕರ್ತರಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

 ಕಾಲೇಜಿನ ಉದ್ಯೋಗ ಮಾರ್ಗದರ್ಶನ, ವೃತ್ತಿ ನಿಯೋಜನಾ ಕೋಶದ ಸಂಯೋಜಕ ಡಾ. ಸಂತೋಷ್ ಪಿಂಟೊ ಶಿರ್ತಾಡಿ ಮತ್ತು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ಜಯಶ್ರೀ ಕಾರ್ಯಕ್ರಮವನ್ನು ಆಯೋಜಿಸಿದರು. ಪ್ರಾಂಶುಪಾಲ ಪ್ರೊ.ಎಂ. ವಿಶ್ವನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿರೋಶ್ ವಂದಿಸಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News