ಸ್ವಾತಂತ್ರ್ಯ ದಿನವನ್ನು 'ಬ್ಲ್ಯಾಕ್ ಡೇ ' ಆಗಿ ಆಚರಿಸಿದ ಹಿಂದೂ ಮಹಾ ಸಭಾ
ಹೊಸದಿಲ್ಲಿ, ಆ.16: ಭಾರತದ ಸಂವಿಧಾನವನ್ನು ವಿರೋಧಿಸಿ ಮೀರತ್ ನ ಅಖಿಲ ಭಾರತ ಹಿಂದೂ ಮಹಾಸಭಾದ ಸದಸ್ಯರು ಸ್ವಾತಂತ್ರ್ಯ ದಿನವನ್ನು 70ನೆ ’ಬ್ಲ್ಯಾಕ್ ಡೇ'ಆಗಿ ’ಆಚರಿಸಿದ ಘಟನೆ ವರದಿಯಾಗಿದೆ.
ನಗರದ ಶ್ರದ್ಧಾ ರಸ್ತೆಯಲ್ಲಿರುವ ಅಖಿಲ ಭಾರತ ಹಿಂದೂ ಮಹಾಸಭಾದ ಕಚೇರಿಯಲ್ಲಿ ಕಳೆದ 69 ವರ್ಷಗಳಿಂದ ಸ್ವಾತಂತ್ರ‍್ಯ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕು ಎನ್ನುವುದು ಅವರ ಬೇಡಿಕೆಯಾಗಿದೆ.
ಸಂವಿಧಾನದಲ್ಲಿ ಭಾರತವನ್ನು ಜಾತ್ಯತೀತ ರಾಷ್ಟ್ರವನ್ನಾಗಿ ಘೋಷಿಸಲಾಗಿದೆ . ಧರ್ಮದ ಆಧಾರದಲ್ಲಿ ಬ್ರಿಟಿಷರು ಮತ್ತು ಭಾರತದ ಕೆಲವು ನಾಯಕರು ಭಾರತವನ್ನು ಯಾವಾಗ ಜಾತ್ಯತೀತ ರಾಷ್ಟ್ರವನ್ನಾಗಿ ಘೋಷಿಸುವ ನಿರ್ಧಾರ ಕೈಗೊಂಡೆರೊ, ಆ ದಿನ ಭಾರತದ ಪಾಲಿಗೆ ಕರಾಳ ದಿನವಾಗಿತ್ತು.
ಮಹಾತ್ಮ ಗಾಂಧಿ ಮತ್ತು ಪಂಡಿತ್ ಜವಾಹರ್‌ಲಾಲ್ ಮುಸ್ಲಿಂರನ್ನು ಭಾರತ ಬಿಡಲು ಅವಕಾಶ ನೀಡಲಿಲ್ಲ. ಈ ಕಾರಣದಿಂದಾಗಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಕನಸು ಈಡೇರಲಿಲ್ಲ. ಅದು ಇಂದಿಗೂ ಕನಸಾಗಿಯೆ ಇದೆ ಎಂದು ನಾಯಕರು ತಿಳಿಸಿದ್ದಾರೆ.