ಕೋಡಿಜಾಲ್: 70ನೆ ಸ್ವಾತಂತ್ರೋತ್ಸವ

Update: 2016-08-16 08:22 GMT

ಕೊಣಾಜೆ, ಆ.16: ಕೋಡಿಜಾಲ್ ರಿಫಾಯಿ ಜುಮಾ ಮಸ್ಜಿದ್, ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಕೋಡಿಜಾಲ್, ಹಯಾತುಲ್ ಇಸ್ಲಾಂ ಮದ್ರಸ ಕೋಡಿಜಾಲ್ ಇದರ ಆಶ್ರಯದಲ್ಲಿ ಮಸೀದಿ ಆವರಣದಲ್ಲಿ 70ನೆ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಸೀದಿಯ ಕೋಶಾಧಿಕಾರಿ ಹಾಜಿ ಮುಹಮ್ಮದ್ ಧ್ವಜಾರೋಹಣಗೈದರು. ಮಸೀದಿಯ ಖತೀಬ್ ಅಲ್ಹಾಜ್ ಅಬೂಬಕರ್ ಸಖಾಫಿ ಮತ್ತು ರಾಮಕೃಷ್ಣ ಪ್ರೌಢಶಾಲೆಯ ಮುಖ್ಯಶಿಕ್ಷಕ ರವೀಂದ್ರ ರೈ ಸ್ವಾತಂತ್ರೋತ್ಸವದ ಸಂದೇಶ ನೀಡಿದರು.

ಈ ಸಂದರ್ಭ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಅಬೂಬಕರ್ ಕೆ.ಎಸ್., ಉಪಾಧ್ಯಕ್ಷ ಅಬ್ದುಲ್ ಖಾದರ್, ಹಾಜಿ ಮುಹಮ್ಮದ್ ಕೆ.ಐ., ಗ್ರಾ.ಪಂ. ಸದಸ್ಯ ಅಚ್ಯುತ ಗಟ್ಟಿ, ಮುತ್ತು ಶೆಟ್ಟಿ, ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್‌ನ ಅಧ್ಯಕ್ಷ ಅಮೀರ್ ಕೋಡಿಜಾಲ್, ಗೌರವಾಧ್ಯಕ್ಷ ಅಬ್ದುಲ್ ರಹ್ಮಾನ್ ಕೆ.ಎಂ., ಉಪಾಧ್ಯಕ್ಷ ಹನೀಫ್, ಲತೀಫ್ ಕೆ.ಎಂ., ರಝಾಕ್, ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಜಿಸಿಸಿ ಘಟಕದ ಮಾಜಿ ಅಧ್ಯಕ್ಷ ಸೂಫಿ ಇಬ್ರಾಹೀಂ, ಪತ್ರಿಕಾ ಕಾರ್ಯದರ್ಶಿ ಇಮ್ತಿಯಾಝ್, ರಿಯಾದ್ ವಲಯ ಕಾರ್ಯದರ್ಶಿ ಅನ್ಸಾರ್, ಮದ್ರಸ ಆಡಳಿತ ಸಮಿತಿಯ ಹಾಜಿ ಹಸನ್ ಕುಂಞಿ, ಹಸೈನಾರ್ ಮತ್ತಿತರರು ಉಪಸ್ಥಿತರಿದ್ದರು.

ಮಸೀದಿಯ ಜೊತೆ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೆ.ಎಸ್. ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ಶರೀಫ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News