ಕಡಬ ಸಮುದಾಯ ಆಸ್ಪತ್ರೆಗೆ ಶಾಸಕ ಎಸ್. ಅಂಗಾರ ದಿಢೀರ್ ಭೇಟಿ
Update: 2016-08-16 14:55 IST
ಕಡಬ, ಆ.16. ಇಲ್ಲಿನ ಸಮುದಾಯ ಆಸ್ಪತ್ರೆಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ನಬಾರ್ಡ್ ಯೋಜನೆಯಡಿಯಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯು ನಡೆಯುತ್ತಿದ್ದು, ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡಗಳು ನಿರ್ಮಾಣವಾಗಲಿವೆ. ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಕಡಬ ಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಕಾರ್ಯದರ್ಶಿ ಪ್ರಕಾಶ್ ಎನ್.ಕೆ., ಪ್ರಮುಖರಾದ ಸೀತಾರಾಮ ಗೌಡ ಪೊಸವಳಿಕೆ, ಸತೀಶ್ ನಾಯಕ್, ಸತೀಶ್ ಕೆ., ಆದಂ ಕುಂಡೋಳಿ, ಪೂವಪ್ಪಗೌಡ, ಜಯರಾಂ ಆರ್ತಿಲ, ದಾಮೋದರ ಗೌಡ ದೆಪ್ಪುಣಿ, ಅಶೋಕ್ ಕುಮಾರ್ ಪಿ., ಫಯಾಝ್ ಕೆನರಾ ಮೊದಲಾದವರು ಉಪಸ್ಥಿತರಿದ್ದರು.