×
Ad

ಮೂಡುಬಿದಿರೆ: ದಾರುನ್ನೂರ್ ಕಾಶಿಪಟ್ಣದಲ್ಲಿ ಸ್ವಾತಂತ್ರ ದಿನಾಚರಣೆ

Update: 2016-08-16 18:13 IST

ಮೂಡುಬಿದಿರೆ, ಆ.16: ಶಹೀದ್ ಸಿ.ಎಂ. ಅಬ್ದುಲ್ಲಾಹ್ ಮುಸ್ಲಿಯಾರ್ ಫೌಂಡೇಶನ್ ಕರ್ನಾಟಕ ಇದರ ಆಶ್ರಯದಲ್ಲಿ ಕಾರ್ಯಾಚರಿಸುತ್ತಿರುವ ಕಾಶಿಪಟ್ಣ ದಾರುನ್ನೂರ್ ಇಸ್ಲಾಮಿಕ್ ಅಕಾಡೆಮಿ ಕ್ಯಾಂಪಸ್‌ನಲ್ಲಿ 70ನೆ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.

ದಾರುನ್ನೂರ್ ದಮ್ಮಾಮ್ನ ಗೌರವಾಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಮದರ್ ಇಂಡಿಯಾ ಧ್ವಜಾರೋಹಣ ನೆರವೇರಿಸಿದರು. ದಾರುನ್ನೂರ್ ಅಕಾಡೆಮಿಯ ಮ್ಯಾನೇಜರ್ ಉಸ್ತಾದ್ ಕೆ.ಐ. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ‘ಸ್ವಾತಂತ್ರ ಸಂಗ್ರಾಮದ ಅನಿವಾರ್ಯತೆ’ ಎಂಬ ವಿಷಯದ ಕುರಿತು ಮಾತನಾಡಿದರು.

ದಾರುನ್ನೂರ್ ಕೇಂದ್ರ ಸಮಿತಿಯ ಪ್ರಮುಖ ಅಬ್ದುಲ್ಲತೀಫ್ ಮದರ್ ಇಂಡಿಯಾ, ಅಬ್ದುಲ್ ರಹ್ಮಾನ್ ದಮ್ಮಾಮ್, ಪ್ರಾಂಶುಪಾಲ ಉಸ್ತಾದ್ ದರ್ವೇಶ್ ಹುದವಿ ಕಾಸರಗೋಡು, ಪ್ರಾಧ್ಯಾಪಕ ನಯೀಮ್ ಹುದವಿ ಕೋಲಾರ, ತ್ವಾಹಾ ಹುದವಿ ಕಡಬ, ಫಾರೂಕ್ ಹುದವಿ ಮೈಸೂರು, ಮುಈನ್ ಹುದವಿ ಉಪ್ಪಿನಂಗಡಿ, ಇಮ್ರಾನ್ ಮಾಸ್ಟರ್ ಉಪ್ಪಿನಂಗಡಿ ಮತ್ತಿತರರು ಉಪಸ್ಥಿತರಿದ್ದರು.

ಅಪರಾಹ್ನ ಮಕ್ಕಳ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ದಾರುನ್ನೂರ್‌ನ ಗೌರವಾಧ್ಯಕ್ಷ ಹಾಜಿ ಮುಹಿಯುದ್ದೀನ್ ಕುಟ್ಟಿ ಕಕ್ಕಿಂಜೆ, ನವಾಝ್ ಕೋಟೆಕಾರ್ ಮತು ಇಬ್ರಾಹೀಂ ಕಾರ್ನಾಡ್ ಭೇಟಿ ನೀಡಿ ಮಕ್ಕಳಿಗೆ ಶುಭಹಾರೈಸಿದರು.

Writer - ಬದ್ರುದ್ದೀನ್ ಹೆಂತಾರ್

contributor

Editor - ಬದ್ರುದ್ದೀನ್ ಹೆಂತಾರ್

contributor

Similar News