ಅಮೆರಿಕ: ಮಸೀದಿ ಇಮಾಮ್ ಹಂತಕನ ಬಂಧನ

Update: 2016-08-16 14:35 GMT

ನ್ಯೂಯಾರ್ಕ್, ಆ. 16: ಅಮೆರಿಕದ ಕ್ವೀನ್ಸ್ ನಗರದಲ್ಲಿ ಎರಡು ದಿನಗಳ ಹಿಂದೆ ನಡೆದ ಇಮಾಮ್ ಮತ್ತು ಅವರ ಸಹಾಯಕನ ಹತ್ಯೆಗೆ ಸಂಬಂಧಿಸಿ, ತಮ್ಮ ಕಸ್ಟಡಿಯಲ್ಲಿದ್ದ ವ್ಯಕ್ತಿಯೊಬ್ಬನ ವಿರುದ್ಧ ಕೊಲೆ ಆರೋಪಗಳನ್ನು ಹೊರಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.

 ಹತ್ಯೆ ಸಂಭವಿಸಿದ ಸ್ಥಳದಿಂದ ಸುಮಾರು ಒಂದು ಮೈಲು ದೂರದಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ರವಿವಾರ ರಾತ್ರಿ ಬ್ರೂಕ್ಲಿನ್ ನಿವಾಸಿ 35 ವರ್ಷದ ಆಸ್ಕರ್ ಮೊರೆಲ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದರು. ಈಗ ಆತನ ವಿರುದ್ಧ ಎರಡು ಕೊಲೆ ಪ್ರಕರಣಗಳು ಮತ್ತು ಶಸ್ತ್ರಗಳನ್ನು ಹೊಂದಿದ ಎರಡು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಆತನು ಹತ್ಯೆಯಲ್ಲಿ ಬಳಸಿದ್ದಾನೆನ್ನಲಾದ ಆಯುಧ ಮತ್ತು ಗುಂಡು ಹಾರಿಸುವ ಸಂದರ್ಭದಲ್ಲಿ ಧರಿಸಿದ ಬಟ್ಟೆಗಳನ್ನೇ ಹೋಲುವ ಬಟ್ಟೆಗಳನ್ನು ಆತನ ಮನೆಯಲ್ಲಿ ಪತ್ತೆಹಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ನ್ಯೂಯಾರ್ಕ್‌ನ ಪೂರ್ವದ ಉಪನಗರದಲ್ಲಿರುವ ಆತನ ಅಪಾರ್ಟ್‌ಮೆಂಟ್‌ನ ಗೋಡೆಯೊಂದರ ಒಳಗೆ ಬಂದೂಕು ಪತ್ತೆಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News