ಶ್ರೀನಿವಾಸ ಭಟ್‌ನನ್ನು ಕಸ್ಟಡಿಗೆ ಪಡೆಯಲು ನಿರ್ಧಾರ
Update: 2016-08-16 21:51 IST
ಉಡುಪಿ, ಆ.16: ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಸಾಕ್ಷ ನಾಶ ಆರೋಪದಡಿ ಬಂಧಿಸಲ್ಪಟ್ಟು ಇದೀಗ ನ್ಯಾಯಾಂಗ ಬಂಧನದಲ್ಲಿರುವ ಶ್ರೀನಿವಾಸ ಭಟ್‌ನಸನ್ನು ಪೊಲೀಸರು ಮತ್ತೆ ಕಸ್ಟಡಿಗೆ ತೆಗೆದುಕೊಳ್ಳುವ ಬಗ್ಗೆ ತಿಳಿದುಬಂದಿದೆ.
ಇವರಿಂದ ಕೆಲವೊಂದು ಅಗತ್ಯ ಸಾಕ್ಷಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಪೊಲೀಸರು ಇದೀಗ ಈ ನಿರ್ಧಾರಕ್ಕೆ ಬಂದಿದ್ದಾರೆ. ಆ.10ರಂದು ಇವರನ್ನು ಪೊಲೀಸರು ಬಂಧಿಸಿ, ಮರುದಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಅವರನ್ನು ಆ.24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಆ.24ರಂದು ಶ್ರೀನಿವಾಸ ಭಟ್‌ರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ತನಿಖಾಧಿಕಾರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇವರೊಂದಿಗೆ ಬಂಧಿತನಾಗಿರುವ ಕಾರು ಚಾಲಕ ರಾಘವೇಂದ್ರನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಅಗತ್ಯ ಪೊಲೀಸರಿಗೆ ಕಂಡುಬಂದಿಲ್ಲ.