ಕಾಶ್ಮೀರ ಮಾತುಕತೆ ಭಾರತ, ಪಾಕ್‌ಗೆ ಬಿಟ್ಟ ವಿಷಯ: ಅಮೆರಿಕ

Update: 2016-08-16 18:33 GMT

ವಾಶಿಂಗ್ಟನ್, ಆ. 16: ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಯಾವುದೇ ದೇಶದ ಪರ ವಹಿಸಲು ನಿರಾಕರಿಸಿರುವ ಅಮೆರಿಕ, ಕಾಶ್ಮೀರದ ಕುರಿತ ಯಾವುದೇ ಮಾತುಕತೆಯ ಗತಿ, ವ್ಯಾಪ್ತಿ ಮತ್ತು ಸ್ವರೂಪವನ್ನು ನಿರ್ಧರಿಸುವುದು ಈ ಎರಡು ದೇಶಗಳಿಗೆ ಬಿಟ್ಟ ವಿಷಯ ಎಂದು ಹೇಳಿದೆ. ‘‘ಕಾಶ್ಮೀರದ ಕುರಿತ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಂಬಂಧ ಸುಧಾರಿಸಲು ಭಾರತ ಮತ್ತು ಪಾಕಿಸ್ತಾನ ತೆಗೆದುಕೊಳ್ಳುವ ಯಾವುದೇ ಮತ್ತು ಎಲ್ಲ ಧನಾತ್ಮಕ ಕ್ರಮಗಳನ್ನು ನಾವು ಬೆಂಬಲಿಸುತ್ತೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಎಲಿಝಬೆತ್ ಟ್ರೂಡೊ ಸೋಮವಾರ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರು. ‘‘ಸಂಘರ್ಷಗಳ ಬಗ್ಗೆ ನಮಗೆ ತಿಳಿದಿದೆ. ಹಿಂಸೆಯ ಬಗ್ಗೆ ನಾವು ಕಳವಳಗೊಂಡಿದ್ದೇವೆ. ಶಾಂತಿಯುತ ಪರಿಹಾರವೊಂದನ್ನು ಕಂಡುಹಿಡಿಯಲು ಸಂಬಂಧಪಟ್ಟ ಎಲ್ಲ ಪಕ್ಷಗಳನ್ನು ನಾವು ಬೆಂಬಲಿಸುತ್ತೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News