×
Ad

‘ಸತ್ಯಕ್ಕೆ ಸಂದ ಜಯ’ ಸಮಾವೇಶ ಕಾರ್ಯಕ್ರಮ

Update: 2016-08-16 23:56 IST


ಬೆಳ್ತಂಗಡಿ, ಆ.16: ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ಅವರ ಕುಟುಂಬದ ಪಾತ್ರ ಇಲ್ಲವೆಂದು ಸಿಬಿಐ ವರದಿ ಸಲ್ಲಿಸಿರುವುದನ್ನು ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಕೇಂದ್ರ ಸಮಿತಿ ಒಕ್ಕೂಟ ಬೆೆಳ್ತಂಗಡಿ ಸ್ವಾಗತಿಸುತ್ತಿದ್ದು, ಸಿಬಿಐ ವರದಿಯಿಂದಾಗಿ ಸತ್ಯಕ್ಕೆ ಸಂದ ಜಯವಾಗಿದೆ ಎಂದು ಕೇಂದ್ರ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ ಅವರು ಮಂಗಳವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಂತಸ ವ್ಯಕ್ತಪಡಿಸಿದರು.
ಕ್ಷೇತ್ರದ ವರ್ಚಸ್ಸಿಗೆ ಭಂಗ ತರುವ ಉದ್ದೇಶದಿಂದ ಅನಾವಶ್ಯಕವಾಗಿ ದುರುದ್ದೇಶ ಪೂರ್ವಕವಾಗಿ ಈ ಪ್ರಕರಣದಲ್ಲಿ ಧರ್ಮಾಧಿಕಾರಿಗಳಿಗೆ ಹಾಗೂ ಅವರ ಕುಟುಂಬದ ಸದಸ್ಯರನ್ನು ಸಿಲುಕಿಸುವ ಪ್ರಯತ್ನ ನಡೆಸಿ ನಿರಂತರವಾಗಿ ಅವಹೇಳನಕಾರಿ ಹೇಳಿಕೆ ಗಳನ್ನು ನೀಡುತ್ತಾ ಬಂದ ಕೆಲವು ಸಂಘ ಸಂಸ್ಥೆಗಳ ಹಾಗೂ ಸಮಾಜ ಘಾತುಕ ಶಕ್ತಿಗಳ ಕೃತ್ಯವನ್ನು ಒಕ್ಕೂಟ ಖಂಡಿಸುತ್ತದೆ. ಆ.19 ರಂದು ಧರ್ಮಸ್ಥಳದಲ್ಲಿ ನಡೆಯುವ ‘ಸತ್ಯಕ್ಕೆ ಸಂದ ಜಯ’ ಸಮಾವೇಶದಲ್ಲಿ ಒಕ್ಕೂಟಗಳ ಸದಸ್ಯರೆಲ್ಲರೂ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಲಯಾಧ್ಯಕ್ಷರಾದ ಶಾರದಾ ಎಸ್., ನಾರಾಯಣ ಸಾಲ್ಯಾನ್ ಅಳದಂಗಡಿ, ಬಾಲಚಂದ್ರ ಹೆಗ್ಡೆ ಮಡಂತ್ಯಾರು, ಶ್ರೀಧರ ಪೂಜಾರಿ ಉಜಿರೆ, ಗೋಪಾಲ ಪೂಜಾರಿ ನಾರಾವಿ, ವಿಠಲ ಗೌಡ ಕೊಕ್ಕಡ, ಯೋಗರಾಜ್ ಚಾರ್ಮಾಡಿ, ಅಶೋಕ್ ಪೂಜಾರಿ ವೇಣೂರು, ಕೃಷ್ಣಪ್ಪ ಕೆ. ಕಣಿಯೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News