ಮಂಜೇಶ್ವರ: ‘ಮಾ ತುಜೇ ಸಲಾಂ’ ವೀಡಿಯೊ ಆಲ್ಬಂ ಬಿಡುಗಡೆ
ಮಂಜೇಶ್ವರ, ಆ.17: ಕಲಾಂಜಲಿ ಆರ್ಟ್ಸ್ ಕ್ರಿಯೇಶನ್ ಮಂಜೇಶ್ವರ ಹೊರತಂದ ಜಗದೀಶ್ ಮಂಜೇಶ್ವರ ನಿರ್ಮಾಣದ ಸಿದ್ದೀಕ್ ಮಂಜೇಶ್ವರ ನಿರ್ದೇಶಿಸಿರುವ ‘ಮಾ ತುಜೇ ಸಲಾಂ’ ಎಂಬ ಹೆಸರಿನ ಪಂಚ ಭಾಷೆಗಳ ಸ್ವಾತಂತ್ರೋತ್ಸವದ ಹಾಡುಗಳನ್ನೊಳಗೊಂಡ ಸಿ.ಡಿ ಬಿಡುಗಡೆ ಸಮಾರಂ ಹೊಸಂಗಡಿ ಗೇಟ್ ವೇ ಸಭಾಂಗಣದಲ್ಲಿ ನಡೆಯಿತು.
ಸಿದ್ದೀಕ್ ಮಂಜೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಅಝೀರ್ ಹಾಜಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲಿಯೂ ಒಂದೊಂದು ಕಲೆಯಿದೆ. ಆ ಕಲೆಯನ್ನು ಹೊರ ತರಲು ವೇದಿಕೆ ಹಾಗೂ ಅವಕಾಶ ಹಾಗೂ ಪ್ರೋತ್ಸಾಹದ ಕೊರತೆಯಿದೆ ಎಂದ ಅವರು ಈ ಕಾರ್ಯದಲ್ಲಿ ಕಲಾಂಜಲಿ ತಂಡದ ಪ್ರಯತ್ನ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸಿಪಿಐ ಮುಖಂಡ ಬಿ.ವಿ. ರಾಜನ್, ಬಿಜೆಪಿಯ ಹರಿಶ್ಚಂದ್ರ ಮಂಜೇಶ್ವರ, ಪತ್ರಕರ್ತ ಆರಿಫ್ ಮಚ್ಚಂಪಾಡಿ, ಸಲಾಂ ವರ್ಕಾಡಿ , ಹಾಗೂ ರಮಾ ಬಾಯಿ ಟೀಚರ್, ಪ್ರಶಾಂತಿ, ಹರೀಶ್ ಕುಂಬಳೆ , ಎಸ್.ಕೆ. ಅಬ್ದುಲ್ಲ ಮಂಜೇಶ್ವರ ಮತ್ತಿತರರು ಉಪಸ್ಥಿತರಿದ್ದರು.