×
Ad

ಕೇರಳದ ಪುಟ್ಟಿಂಗಲ್ ಸಿಡಿಮದ್ದು ದುರಂತ: ಬರೇ ಘೋಷಣೆಯಾಗಿ ಉಳಿದಿರುವ ನ್ಯಾಯಾಂಗ ತನಿಖೆ!

Update: 2016-08-17 13:14 IST

ಕೊಚ್ಚಿ,ಆ.17: ನೂರಹತ್ತು ಜನರ ಮರಣಕ್ಕೆ ಕಾರಣವಾದ ಕೊಲ್ಲಂ ಪುಟ್ಟಿಂಗಲ್ ಸಿಡಿಮದ್ದು ದುರಂತ ತನಿಖೆಯ ಸಮಯಾವಧಿ ಕೊನೆಗೊಳ್ಳುತ್ತಿದ್ದರೂ ತನಿಖೆಯ ವಿಷಯವನ್ನು ಸರಕಾರ ನಿಶ್ಚಯಿಸಿಲ್ಲ ಎಂದು ವರದಿಯಾಗಿದೆ.

 ಅಪಘಾತ ನಡೆದು ಕೆಲವೇ ದಿವಸಗಳಲ್ಲಿ ನಿವೃತ್ತ ನ್ಯಾಯಾಧೀಶ ಎನ್.ಕೃಷ್ಣನ್ ನಾಯರ್‌ನ್ನು ಜ್ಯುಡಿಶಿಯಲ್ ಕಮೀಶನರ್ ಆಗಿ ನೇಮಕಗೊಳಿಸಿ ಆದೇಶವನ್ನು ಹೊರಡಿಸಿದ್ದರೂ ತನಿಖೆಯ ವಿಷಯ ವ್ಯಾಪ್ತಿಯನ್ನು(ಟ್ರಂಪ್ಸ್ ಆಫ್ ರೆಫರನ್ಸ್‌ನ್ನು)ಈ ವರೆಗೂ ನಿಶ್ಚಯಿಸಲಾಗಿಲ್ಲ ಎನ್ನಲಾಗಿದೆ.

 2016 ಎಪ್ರಿಲ್ 21ಕ್ಕೆ ಹೊರಡಿಸಲಾದ ಆದೇಶದಲ್ಲಿ ಆರು ತಿಂಗಳೊಳಗೆ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿತ್ತು. ಆದೇಶ ನೀಡಿ ನಾಲ್ಕುತಿಂಗಳುಕಳೆದರೂ ಕೇರಳ ಆರ್‌ಟಿಐ ಫೆಡರೇಶನ್‌ಗಾಗಿ ನ್ಯಾಯಾವಾದಿ ಡಿ.ಬಿ. ಬಿನು ಎಂಬವರು ಸಲ್ಲಿಸಿದ ಅರ್ಜಿಗೆ ಟರ್ಮ್ಸ್ ಆಫ್ ರೆಫರೆನ್ಸನ್ನು ಈವರೆಗೂ ನಿಶ್ಚಯಿಸಲಾಗಿಲ್ಲ ಎಂದು ಸರಕಾರ ತಿಳಿಸಿದೆ.

   2016 ಎಪ್ರಿಲ್ 10ಕ್ಕೆ ನಡೆದಿದ್ದ ಸಿಡಿಮದ್ದು ಅವಗಡದ ನ್ಯಾಯಾಂಗ ತನಿಖೆಗೆ ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸರಕಾರ ಆದೇಶಿಸಿತ್ತು. ಈ ಪ್ರಕಟನೆ ಹೊರಬಿದ್ದ ನಂತರ ಮುಂದಿನ ಆರು ತಿಂಗಳೊಳಗೆ ತನಿಖೆ ಪೂರ್ತಿಗೊಳಿಸಿ ಸರಕಾರಕ್ಕೆ ವರದಿಯನ್ನು ಸಲ್ಲಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿತ್ತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News